Mysore
18
broken clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ನ.11ರಂದು ಹನೂರಿನಲ್ಲಿ ಕನಕದಾಸರ ಜಯಂತಿ ಆಚರಣೆ

ಹನೂರು: ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಸಮುದಾಯದವರು ಹಾಗೂ ವಿವಿಧ ಸಮುದಾಯದವರು ಸೇರಿ ಅತ್ಯಂತ ವಿಜೃಂಭಣೆಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಆರ್.ನರೇಂದ್ರ ಅವರು ತಿಳಿಸಿದರು.

ಕನಕ ಜಯಂತಿ ಆಚರಣೆ ಪೂರ್ವಭಾವಿ ಸಭೆ ಅಂಗವಾಗಿ ಪಟ್ಟಣದ ಲೋಕೋಪಯೋಗಿ ವಸತಿಗೃಹ ಸಭಾಂಗಣದಲ್ಲಿ ಕರೆಯಲಾಗಿದ್ದ ಅಧಿಕಾರಿಗಳು ಹಾಗೂ ಮುಖಂಡರುಗಳ ಸಭೆಯ ಬಳಿಕ ಸುದ್ದಿಗಾರರೊಡನೆ ಮಾತನಾಡಿದರು.

ನ.11ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಆರ್. ಎಂ. ಸಿ. ಆವರಣದಿಂದ ಕ್ರಿಸ್ತ ರಾಜ ಶಾಲೆವರೆಗೆ ಕನಕದಾಸರ ಮೆರವಣಿಗೆ ವಿವಿಧ ಕಲಾತಂಡಗಳು ವಾದ್ಯ ಮೇಳಗಳೊಂದಿಗೆ ಜರುಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಮುಖ್ಯಾಧಿಕಾರಿ ಮೂರ್ತಿ ಇಒ ಶ್ರೀನಿವಾಸ್ ,ಮುಖಂಡರುಗಳಾದ ಅಜ್ಜೀಪುರ ನಾಗರಾಜು ಬಸಪ್ಪನದೊಡ್ಡಿ ಮಹದೇವ್ ಪ್ರಸಾದ್ ಸೇರಿದಂತೆ ಇನ್ನಿತರರು ಹಾಜರಿದ್ದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!