Mysore
23
haze

Social Media

ಮಂಗಳವಾರ, 06 ಜನವರಿ 2026
Light
Dark

ನ.18 ರಂದು ಮಹಿಳೆಯರಿಗಾಗಿ ಉದ್ಯೋಗ ಮೇಳ ಆಯೋಜನೆ

ಮೈಸೂರು :  ಇದೇ ತಿಂಗಳ ದಿನಾಂಕ 18 ರಂದು ನಗರದ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ  ಎಜುಕೇರ್ ಐಟಿಇಎಸ್ ಮತ್ತು ವುಮೆನ್ ಕ್ಯಾನ್ ಫೌಂಡೇಶನ್ ವತಿಯಿಂದ ಮಹಿಳೆಯರಿಗಾಗಿಯೇ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ.

ಇಂದು ಜಿಲ್ಲಾಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಜುಕೇರ್ ವ್ಯವಸ್ಥಾಪಕ ನಿರ್ದೇಶಕರಾದ ರಚನಾ ಮಹೇಶ್ ಅವರು ಅಂದು ಬೆಳಿಗ್ಗೆ ೯.೩೦ ರಿಂದ ೬.೩೦ರವರೆಗೆ ಕಾರ್ಯಕ್ರಮ ನಡೆಲಿದೆ. ಇದು ಮಹಿಳೆಯರಿಗಾಗಿ ನಡೆಸುತ್ತಿರುವ ಉದ್ಯೋಗ ಮೇಳವಾಗಿದೆ. ಈಗಾಗಲೇ ೩೦ ಕಂಪನಿಗಳು ಬರುವುದಾಗಿ ನೋಂದಾವಣಿಯಾಗಿವೆ ಎಂದು ತಿಳಿಸಿದ್ದಾರೆ.

ಯಾರೆಲ್ಲಾ ಮಹಿಳೆಯರು ಭಾಗವಹಿಸಬಹುದು ? 

೧೮ರಿಂದ ೪೫ ವರ್ಷದ ಮಹಿಳೆಯರು ಮೇಳದಲ್ಲಿ ಉದ್ಯೋಗ ಹುಡುಕಬಹುದು. ಎಸ್‌ಎಸ್‌ಎಲ್‌ಸಿಯಿಂದ ಹಿಡಿದು ಯಾವುದೇ ಪದವಿ, ಡಿಪ್ಲೋಮಾ ಪಡೆದವರು ಅರ್ಹರಿದ್ದಾರೆ. ಇನ್ನು ಮಾರಾಟ ಪ್ರದರ್ಶನದಲ್ಲಿ ಮಹಿಳೆಯರೇ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಬಹುದು. ಹೀಗೆ ಮಾರಾಟ ಮಾಡುವ ಮಹಿಳೆಯರು ತಮ್ಮ ಸಂಸ್ಥೆಯ ಬ್ಯಾನರ್ ಅನ್ನು ಒಳಗೊಂಡಿರಬೇಕು. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: ೬೩೬೪೩೪೦೦೨೭, ೭೨೦೪೮೦೯೦೮೫, ೮೬೬೦೨೩೯೬೯೯ ಸಂಪರ್ಕಿಸಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಡಾ.ಸೋಮಣ್ಣ, ಡಾ.ನಿರಂಜನಬಾಬು, ಪ್ರತಿಭಾ ಗುರುರಾಜ್, ಶೋಭಾ, ನಂದಿನಿ ಇತರರು ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!