ಮೈಸೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ 60ನೇ ರಾಷ್ಟ್ರೀಯ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್ನ ಕ್ರೀಡಾಕೂಟದಲ್ಲಿ ರಾಜ್ಯದ ಹಿರಿಯ ಸ್ಕೇಟರ್, ಮೈಸೂರಿನ ರಿಯಾ ಎಲಿಝಬೆತ್ ಆಚಯ್ಯ 5 ಚಿನ್ನ ಹಾಗೂ 1 ಬೆಳ್ಳಿ ಪದಕದೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. 10ಕೆ ರೋಡ್ ಪಾಯಿಂಟ್ಸ್ ಪ್ಲಸ್ ಎಲಿಮಿನೇಷನ್ ರೇಸ್ನಲ್ಲಿ ಚಿನ್ನ , ೧೫ಕೆ ರೋಡ್ ಎಲಿಮಿನೇಷನ್ ರೇಸ್, ರೋಡ್ ಒನ್ ಲ್ಯಾಪ್ ರೇಸ್, 4ಕೆ ಮಿಕ್ಸೆಡ್ ರಿಲೇನಲ್ಲಿ ಚಿನ್ನ3ಕೆ ರಿಲೇ ಚಿನ್ನದ ಪದಕ, ರಿಂಕ್ 500 ಮೀಟರ್ ಮತ್ತು ಡಿ ರೇಸ್ನಲ್ಲಿ ಬೆಳ್ಳಿ ಗಳಿಸಿದ್ದಾರೆ.
ಬೆಂಗಳೂರಿನಲ್ಲಿ ಡಿ. ೨೩ರಿಂದ ೨೫ ರವರಗೆ ನಡೆಯಲಿರುವ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಪ್ರಕ್ರಿಯೆಗೆ ತಾಲಿಮು ನಡೆಸುತ್ತಿದ್ದು, ಮುಂದಿನ ವರ್ಷ ನಡೆಯಲಿರುವ ಏಷಿಯನ್ ಗೇಮ್ಸ್ ಮತ್ತು ವಿಶ್ವ ರೋಲರ್ ಸ್ಕೆಟರ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಪದಕ ಗೆಲ್ಲುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು. ರಿಯಾ ಆಚಯ್ಯ ನಗರದ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇನ್ಛಾರ್ಮೆಶನ್ ಸೈನ್ಸ್ ವಿಭಾಗದ 7ನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದಾರೆ.





