ಹನೂರು : ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್ ನರೇಂದ್ರ ಅವರನ್ನು ಗುಣಗಾನ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ.
ಡಿಸೆಂಬರ್ 12ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ಹನೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದರು. ಈ ವೇಳೆ ಪಪಂ ಮಾಜಿ ಸದಸ್ಯ ಬಸವರಾಜು ಹನೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ನೀವು ಹನೂರು ಕ್ಷೇತ್ರಕ್ಕೆ ಬನ್ನಿ ಎಂದು ಮನವಿ ಮಾಡಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಪ್ರತಿಕ್ರಿಯಿಸಿ ಈ ಹಿಂದೆ ರಾಜುಗೌಡ ಹಾಗೂ ಫೈಟಿಂಗ್ ನಡೆಸುತ್ತಿದ್ದರು ಆದರೆ ಶಾಸಕ ಆರ್ ನರೇಂದ್ರ ಶಕ್ತಿಮೀರಿ ಅಭಿವೃದ್ಧಿ ಮಾಡುತ್ತಿದ್ದಾರೆ ಅವರನ್ನು ಪಕ್ಷಾತೀತವಾಗಿ ಅಭಿನಂದಿಸಬೇಕು. ಹನೂರು ಕ್ಷೇತ್ರದ ವಿಸ್ತೀರ್ಣ ಸುಮಾರು 180 ಕಿಲೋಮೀಟರ್ ವಿಸ್ತರಣವಿದೆ ಈ ಕ್ಷೇತ್ರದ ಅಭಿವೃದ್ಧಿ ಅಷ್ಟು ಸುಲಭವಾದ ಮಾತಲ್ಲ ಎಂದು ಶಾಸಕ ಆರ್ ನರೇಂದ್ರ ಅವರ ಪರ ಮೆಚ್ಚುಗೆ ವ್ಯಕ್ತಪಡಿಸಿದರು.





