ಮೈಸೂರು : ಸತತವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಮನೆಯು ಕುಸಿತಗೊಂಡಿದ್ದು ಮನೆಯಲ್ಲಿ ವಾಸವಿದ್ದ ಮಹಿಳೆ ಆಶ್ರಯಕ್ಕಾಗಿ ಶೌಚಾಲಯವನ್ನೇ ವಾಸಿಸುತ್ತಿದ್ದ ಘಟನೆ ನಂಜನಗೂಡು ತಾಲ್ಲೂಕಿನ ಹೆಡತಲೆ ಗ್ರಾಮದಲ್ಲಿ ಕಂಡುಬಂದಿದ್ದು,
ಗ್ರಾಮದ ನಿವಾಸಿ ಸಿದ್ದಮ್ಮ ಎಂಬುವವರೇ ಮನೆ ಕಳೆದುಕೊಂಡು ಶೌಚಾಲಯದಲ್ಲಿ ವಾಸ ಮಾಡುತ್ತಿದ್ದವರು. ಈ ವಿಷಯ ತಿಳಿದು ಸ್ಥಳಕ್ಕೆ ಅಲ್ಲಿಯ ಸ್ಥಳೀಯ ತಹಶೀಲ್ದಾರ್ ಶಿವಮೂರ್ತಿ ಅವರು ಭೇಟಿ ನೀಡಿ ಮನೆ ನಿರ್ಮಾಣಕ್ಕಾಗಿ ಸರ್ಕಾರದಿಂದ 5 ಲಕ್ಷಗಳ ಪರಿಹಾರವನ್ನು ನೀಡಿದ್ದು.ಮನೆ ಹಾನಿಗೆ 1ನೇ ಕಂತಾಗಿ 95100 ರೂ. ಮತ್ತು ಬಟ್ಟೆ ಮತ್ತು ಪಾತ್ರೆ ಹಾನಿಗೆ 10,000 ರೂ.ಗಳನ್ನು ಪಾವತಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ತಿಳಿಸಿದ್ದಾರೆ.