ಚಾಮರಾಜನಗರ : ತಾಲ್ಲೂಕಿನ ನಲ್ಲೂರು ಮೋಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಜಾಗೃತಿಯ ಜಾಥಾ ನಡೆಸಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಘೋಷಣೆ ಕೂಗುತ್ತಾ ಜಾಥಾ ನಡೆಸಿದರು. ರಾಮಮಂದಿರ ಹತ್ತಿರ ಸೇರಿ ನೆರದಿದ್ದ ಗ್ರಾಮಸ್ಥರಿಗೆ ಶೌಚಾಲಯದ ಮಹತ್ವದ ಕುರಿತಾಗಿ ಬೀದಿನಾಟಕ ವಾಡಿದರು.
ಗ್ರಾಪಂ ಸದಸ್ಯರು, ಊರಿನ ಪ್ರಮುಖರು, ಮುಖ್ಯಶಿಕ್ಷಕ ವೆಂಕಟರಾಮು, ಶಿಕ್ಷಕಿಯರಾದ ನಾಗರತ್ನ, ಪುಷ್ಪಲತ, ತರಬೇತುದಾರ ಮನೋಜ್ ಮಸು ಭಾಗವಹಿಸಿದ್ದರು.





