Mysore
14
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಮಂಜಿನ ನಗರಿಯಲ್ಲಿ ಮೊದಲ ‘ಕೂರ್ಗ್ ಕಾಫಿ ಉತ್ಸವ’

ಮಡಿಕೇರಿ: ಇಲ್ಲಿನ ರಾಜಾಸೀಟ್ ಉದ್ಯಾನದಲ್ಲಿ ಡಿ. 10 ಹಾಗೂ 11ರಂದು ಕೂರ್ಗ್ ಕಾಫಿ ಉತ್ಸವವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.

ಕೊಡಗು ಜಿಲ್ಲಾಡಳಿತ, ಕಾಫಿ ಮಂಡಳಿ ಹಾಗೂ ತೋಟಗಾರಿಕಾ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ಈ ಉತ್ಸವದಲ್ಲಿ ಖಾಸಗಿ ಸಂಸ್ಥೆಗಳು ಕಾಫಿಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಅವರು ಇಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೊಡಗಿನ ಕಾಫಿ ಬಳಕೆಯನ್ನು ಮತ್ತಷ್ಟು ಹೆಚ್ಚಿಸಲು ಆಯೋಜಿಸಿರುವ ಈ ಉತ್ಸವದಲ್ಲಿ ಎಲ್ಲ ಕಾಫಿ ಪಾಲುದಾರರನ್ನು ಒಂದೇ ಸೂರಿನಡಿ ತರಲಾಗುವುದು ಎಂದರು.

ಅತ್ಯುತ್ತಮ ಕಾಫಿ ಬ್ರಾಂಡ್ ಗಳು, ಸ್ವಸಹಾಯ ಗುಂಪುಗಳ ಕಾಫಿ ಉತ್ಪನ್ನಗಳು, ಬ್ರೂಯಿಂಗ್ ಯಂತ್ರೋಪಕರಣಗಳು ಪ್ರದರ್ಶನದಲ್ಲಿ ಇರಲಿವೆ ಎಂದು ಹೇಳಿದರು.

ಡಿ.24 ಮತ್ತು 25 ರಂದು ಜೇನುಮೇಳ ಹಾಗೂ ಜನವರಿ ಎರಡನೇ ವಾರದಲ್ಲಿ ವೈನ್ ಮೇಳ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ನುಡಿದರು.

ಇದೇ ವೇಳೆ ಕೂರ್ಗ್ ಕಾಫಿ ಉತ್ಸವದ ವಿಡಿಯೊವನ್ನು ಇದೇ ವೇಳೆ ಅವರು ಬಿಡುಗಡೆ ಮಾಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!