ಚಾಮರಾಜನಗರ: ನಗರಸಭೆ ನೂತನ ಆಯುಕ್ತರಾಗಿ ಎಸ್.ವಿ.ರಾಮದಾಸ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ರಾಮದಾಸ್ ಅವರು ಮಡಿಕೇರಿ ನಗರಸಭೆಯಲ್ಲಿ ಎರಡು ವರ್ಷ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲಿಂದ ಬೆಂಗಳೂರಿನ ಲಾಲ್‌ಬಾಗ್‌ನ ತೋಟಗಾರಿಕೆ ಇಲಾಖೆಗೆ ವರ್ಗಾವಣೆಗೊಂಡು ಮೂರು ತಿಂಗಳ
ಕಾಲ ಕಾರ್ಯನಿರ್ವಹಿಸಿದ್ದ ರಾಮದಾಸ್ ಅವರನ್ನು ಚಾ.ನಗರ ನಗರಸಭೆ ಆಯುಕ್ತರನ್ನಾಗಿ ನಿಯೋಜಿಸಿದೆ.
ನಗರಸಭೆ ಪ್ರಭಾರ ಆಯುಕ್ತರಾಗಿದ್ದ ನಟರಾಜು ಅವರಿಂದ ಎಸ್.ವಿ.ರಾಮದಾಸ್ ಅಧಿಕಾರ ವಹಿಸಿಕೊಂಡರು. ಕಂದಾಯ ಅಧಿಕಾರಿ ಶರವಣ, ಪರಿಸರ ಎಂಜಿನಿಯರ್ ಗಿರಿಜಾ, ಸಿಬ್ಬಂದಿ ಹಾಜರಿದ್ದರು.