Mysore
25
mist

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಮೈಸೂರಿಗರಿಗೆ ಸಿಹಿ ಸುದ್ದಿ : ನಗರಕ್ಕೆ ಬರಲಿದೆ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು!

ನವದೆಹಲಿ: ದಕ್ಷಿಣ ಭಾರತದಲ್ಲೂ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಸಂಚಾರ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಚೆನ್ನೈ, ಬೆಂಗಳೂರು ಹಾಗೂ ಮೈಸೂರು ನಡುವೆ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲು ಶೀಘ್ರವೇ ಆರಂಭವಾಗಲಿದೆ.

ಈಗಾಗಲೇ ದೇಶದಲ್ಲಿ ನಾಲ್ಕು ಕಡೆ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲು ಸಂಚಾರ ಆರಂಭಿಸಿವೆ. ಇದೀಗ ಐದನೇ ರೈಲನ್ನು ದಕ್ಷಿಣ ಭಾರತದ ಪ್ರಮುಖ ನಗರಗಳಾದ ಚೆನ್ನೈ, ಬೆಂಗಳೂರು ಹಾಗೂ ಮೈಸೂರು ಮಧ್ಯೆ ಪ್ರಾರಂಭಿಸಲು ಯೋಜಿಸಲಾಗಿದೆ. ಇದೇ ನವೆಂಬರ್​ 10ರಂದು ಈ ಮೂರು ನಗರಗಳನ್ನು ಸಂದಿಸುವ ರೈಲು ಆರಂಭವಾಗುವ ನಿರೀಕ್ಷೆ ಇದೆ.

ಇತೀಚಿಗಷ್ಟೆ ಪ್ರಧಾನಿ ನರೇಂದ್ರ ಮೋದಿ ದೇಶದ ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು. ಹಿಮಾಚಲ ಪ್ರದೇಶದ ಉನಾ ಹಾಗೂ ದೆಹಲಿ ಮಧ್ಯೆ ಈ ರೈಲಿಗೆ ಹಸಿರು ನಿಶಾನೆಯನ್ನು ಮೋದಿ ತೋರಿಸಿದ್ದರು. ಇನ್ನು, ಈಗಾಗಲೇ ಗುಜರಾತ್​ನ ಗಾಂಧಿ ನಗರ ಮತ್ತು ಮಹಾರಾಷ್ಟ್ರದ ಮುಂಬೈ ಹಾಗೂ ವಾರಾಣಸಿ ಹಾಗೂ ದೆಹಲಿ ನಡುವೆ ಸೆಮಿ ಹೈಸ್ಪೀಡ್​ ರೈಲು ಸಂಚರಿಸುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ