ಶೌಚಾಲಯವಿದೆ ನೀರಿಲ್ಲ!
ಮೈಸೂರು: ಸೋಮವಾರ ಬೆಳಿಗ್ಗೆ ಜನರಿಲ್ಲದೆ ಬಿಕೋ ಎನ್ನುತಿದ್ದ ಫಲಪುಷ್ಪ ಪ್ರದರ್ಶನ ಸಂಜೆ ಯಾಗುತ್ತಿದಂತೆ ಜನ ಜಂಗುಳಿಯಿಂದ ಕೂಡಿತ್ತು. ಫಲಪುಷ್ಪ ಪ್ರದರ್ಶನದಲ್ಲಿ ಶೌಚಲಯ ಇದ್ದರೂ ನೀರಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದ ದೃಶ್ಯ ಕಂಡು ಬಂತು. ಇದರ ಬಗ್ಗೆ ತೋಟಗಾರಿಕೆ ಇಲಾಖೆಯವರು ಗಮನಹರಿಸಬೇಕು ಎಂದು ಸಾರ್ವಜನಕರು ಹೇಳಿದರು. ಫಲಪುಷ್ಪ ಪ್ರದರ್ಶನದಲ್ಲಿ ಹೆಚ್ಚಿನ ಮಳಿಗೆಗಳು ಖಾಲಿ ಇರುವುದು ಕಂಡು ಬಂತು. ಗಾಜಿನ ಮನೆಯಲ್ಲಿ ನಿರ್ಮಿಸಿರುವ ರಾಷ್ಟ್ರಪತಿ ಭವನ ಮಾದರಿ ಜನಾಕರ್ಷಣೆಯ ಕೇಂದ್ರವಾಗಿದ್ದು, ಸಾರ್ವಜನಿಕರು ಸೆಲ್ಪಿ ಕ್ಲಿಕ್ಕಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.




