- ಮೈಸೂರು : ನಿವೃತ್ತ ತಹಸೀಲ್ದಾರ್ ಹಾಗೂ ಲೇಖಕ ಡಾ.ವಿ.ರಂಗನಾಥ್ ಸಂಪಾದನೆಯ ಅವರ ಐದು ಕೃತಿಗಳ ಬಿಡುಗಡೆ ಸಮಾರಂಭ ನ.೧೩ರ ಬೆಳಗ್ಗೆ ೧೧ಕ್ಕೆ ಲಕ್ಷ್ಮೀಪುರಂ ಗೋಪಾಲಸ್ವಾಮಿ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.
ಸಂಸ್ಕೃತಿ ಪ್ರಕಾಶನ ಹೊರ ತಂದಿರುವ ವೈಶಾಲ್ಯವೇ ಜೀವನ- ಸಂಕುಚಿತತೆಯೇ ಮರಣ, ಜೀವನ ಪ್ರೀತಿ, ದಸರಾ, ಪಿತ್ರಾರ್ಜಿತ ಕಾದಂಬರಿ, ಬೇಡಾದ ಬಾಳು ಕೃತಿಗಳನ್ನು ಸಂಗೀತ ವಿವಿ ಕುಲಪತಿ ಪ್ರೊ.ನಾಗೇಶ ಬೆಟ್ಟಕೋಟೆ ಬಿಡುಗಡೆ ಮಾಡುವರು. ಆರ್‌ಎಸ್ ಎಸ್ ಪ್ರಾಂತ ಕಾರ‌್ಯಕಾರಿ ಸಮಿತಿ ಸದಸ್ಯ ಮ.ವೆಂಕಟರಾಮು ಅಧ್ಯಕ್ಷತೆ ವಹಿಸುವರು. ಕೃತಿಗಳ ಕುರಿತು ವೈದ್ಯ ಡಾ.ಎ.ಎಸ್.ಚಂದ್ರಶೇಖರ್ ಮಾತನಾಡುವರು. ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಪ್ರಕಾಶಕ ಸಂಸ್ಕೃತಿ ಸುಬ್ರಹ್ಮಣ್ಯ ತಿಳಿಸಿದ್ಧಾರೆ.





