Mysore
25
mist

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಕೇರಳ ಭಾಗದಲ್ಲಿ ನಿಫಾ ವೈರಸ್‌

ಮೈಸೂರು: ಕೇರಳ ಭಾಗದಲ್ಲಿ ನಿಫಾ ವೈರಸ್‌ ಕುರಿತು ಜನರಿಗೆ ಆತಂಕ ಬೇಡ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ. ಹಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಫಾ ವೈರಸ್‌ ನಿಯಂತ್ರಣ ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ವರ್ಚುವಲ್‌ ಸಭೆಯಲ್ಲಿ ಮಾತನಾಡಿದರು.

 

‘‘ಕೇರಳ ಗಡಿ ಭಾಗದ ನಂಜನಗೂಡು ಹಾಗೂ ಎಚ್‌.ಡಿ.ಕೋಟೆ ಭಾಗದ ಬಾವಲಿ ಬಳಿ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಕೇರಳದಿಂದ ಬರುವವರನ್ನು ಪರೀಕ್ಷೆ ಮಾಡಲಾಗುತ್ತಿದೆ. ಗಡಿಭಾಗದ ಜನರಲ್ಲಿ ಜ್ವರ, ತಲೆನೋವು, ಮೈಕೈ ನೋವು ಇದ್ದರೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ,’’ ಎಂದರು.

 
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ