Mysore
21
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಕರ್ತವ್ಯದ ಜೊತೆಗೆ ಮತದಾನ ಅರಿವು ಮೂಡಿಸುತ್ತಿರುವ ಪೌರಕಾರ್ಮಿಕರು

ಮೈಸೂರು : ತಾಲೂಕು ಕಡಕೊಳ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕ ಬಂಧುಗಳು  ತಮ್ಮ ಕರ್ತವ್ಯದ ಜೊತೆಗೆ  ಮುಂದಿನ ಲೋಕಸಭಾ ಚುನಾವಣೆ  ಕಡ್ಡಾಯ ಮತದಾನ ಮಾಡುವ ಕುರಿತು ಸಾರ್ವಜನಿಕ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೂಡ ಮಾಡುತ್ತಿದ್ದಾರೆ.
ಪೌರಕಾರ್ಮಿಕರ ಈ ಕೆಲಸಕ್ಕೆ ಹೆಚ್ಚು  ಮೆಚ್ಚುಗೆ ವ್ಯಕ್ತವಾಗಿದೆ.  ಅವರು ಕರ್ತವ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ವಾಹನದ ಮುಂಭಾಗ ಬ್ಯಾನರ್ ಅಳವಡಿಸಿಕೊಂಡು  ಅಲ್ಲಿ ಮತದಾನದ ಅರಿವು ಮೂಡಿಸುವಂತಹ ಕೆಲಸವನ್ನು ಕೂಡ ಮಾಡುತ್ತಿದ್ದಾರೆ.
ಅಲ್ಲಿ ಮತದಾನ ನನ್ನ ಹಕ್ಕು ತಪ್ಪದೇ ಮತದಾನ ಮಾಡುವ ಸಂಕಲ್ಪ  ಇನ್ನಿತರ ಘೋಷವಾಕ್ಯಗಳನ್ನ ಅಳವಡಿಸಿಕೊಂಡು ಪ್ರಚಾರ ಕಾರ್ಯವನ್ನು ಮಾಡುತ್ತಿದ್ದಾರೆ .. ಇವರ ಕಾರ್ಯ ಹಲವಾರು ಸಂಘ ಸಂಸ್ಥೆಗಳಿಗೆ ಮಾದರಿಯಾದ ಕಾಯಕವಾಗಿರುತ್ತದೆ.
Tags:
error: Content is protected !!