ನಂಜನಗೂಡು : ಬೈಕ್ ಸಮೇತ ಯುವಕ ಸಜೀವ ದಹನವಾಗಿರುವ ಘಟನೆ ತಾಲ್ಲೂಕಿನ ಕೊರೆಹುಂಡಿ ಗ್ರಾಮದ ಹುಲ್ಲಹಳ್ಳಿ ನಾಲೆ ಬಳಿ ನಡೆದಿದೆ.
ತಾಲ್ಲೂಕಿನ ರಾಂಪುರ ಗ್ರಾಮದ ಆದಿತ್ಯ(24) ಮೃತ ಯುವಕನಾಗಿದ್ದಾನೆ.
ಸೋಮವಾರ ಸಂಜೆ ವೇಳೆ ನಂಜನಗೂಡಿನಿಂದ ಕೊರೆಹುಂಡಿಗೆ ತೆರಳುವ ಮಾರ್ಗದ ಹುಲ್ಲಹಳ್ಳಿ ನಾಲೆ ಪಕ್ಕದಲ್ಲಿ ಬೈಕ್ ನಲ್ಲಿ ಹೋಗುತ್ತಿದಾಗ ಬೈಕ್ ಸಮೇತ ಯುವಕನ ದೇಹ ಮತ್ತು ಬೈಕ್ ಸುಟ್ಟು ಕರಕಲಾಗಿದೆ. ಈತನ ಸಾವು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಬೈಕ್ ಗೆ ಬೆಂಕಿ ಹತ್ತಿಕೊಂಡರೆ ಓಡಿ ತಪ್ಪಿಸಿಕೊಳ್ಳಬಹುದಿತ್ತು. ಆದ್ರೆ ಬೈಕ್ ಸಮೇತ ಯುವಕ ಸಹ ಸುಟ್ಟು ಹೋಗಿರುವುದು ಸಹಜವಲ್ಲ ಎಂಬುದು ಕುಟುಂಬಸ್ಥರು ಆರೋಪವಾಗಿದೆ.
ನಿರ್ಜನ ಪ್ರದೇಶದಲ್ಲಿ ಯಾರೋ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿರಬಹುದೆಂದು ಶಂಕಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.





