ಮೈಸೂರು: ಶಿವರಾತ್ರಿ ಹಬ್ಬದ ಜೊತೆ ಸರಣಿ ರಜೆ ಹಿನ್ನೆಲೆ, ಹಾಲಿಡೇ ಸಂಭ್ರಮದಲ್ಲಿದ್ದ ಯುವಕನೋರ್ವ ಈಜಲು ತೆರಳಿ ನೀರುಪಾಲಾದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ಹತ್ವಾಳು ಕಟ್ಟೆಯಲ್ಲಿ ನಡೆದಿದೆ.
ನಗರದ ಅಶೋಕಪುರಂ ನಿವಾಸಿ ತೇಜಸ್(24) ಕುಮಾರ್ ಮೃತ ಯುವಕ. ಶಿವರಾತ್ರಿ ಹಬ್ಬ ಹಾಗೂ ವೀಕೆಂಡ್ ಹಿನ್ನಲೆ ತೇಜಸ್ ಕುಮಾರ್ ಹುಲ್ಲಹಳ್ಳಿ ಸಮೀಪದ ಹತ್ವಾಳ್ ಕಟ್ಟೆ ಬಳಿ ಸ್ನೇಹಿತರೊಂದಿಗೆ ತೆರಳಿದ್ದಾನೆ. ಸ್ನೇಹಿತರು ನೀರಿನಲ್ಲಿ ಈಜುತ್ತಿದ್ದರು. ಈಜು ಬಾರದಿದ್ದರೂ ತೇಜಸ್ ನೀರಿಗೆ ಹಾರಿದ್ದಾನೆ. ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ.
ತೇಜಸ್ ಖಾಸಗಿ ಕಂಪನಿಯಲ್ಲಿ ವ್ಯವಸ್ಥಾಪಕ ಎಂದು ಹೇಳಲಾಗಿದೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಕುಮಾರ್ ಸಿಬ್ಬಂದಿಗಳಾದ ದೊಡ್ಡಯ್ಯ, ಕಿರಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.