Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ದೇವರಾಜ ಮಾರುಕಟ್ಟೆ ಉಳಿಸುವ ಹೋರಾಟದಲ್ಲಿ ಯಾವಾಗಲೂ ಪಾಲ್ಗೊಳ್ಳುತ್ತೇನೆ ; ಯದುವೀರ್

ಮೈಸೂರು : ದೇವರಾಜ ಮಾರುಕಟ್ಟೆ ನಮ್ಮ ಮೈಸೂರಿನ ಒಂದು ಕೇಂದ್ರ ಬಿಂದು. ದೇವರಾಜ ಮಾರುಕಟ್ಟೆ ಉಳಿಸುವ ಹೋರಾಟದಲ್ಲಿ ನಾನು ಯಾವಾಗಲೂ ಪಾಲ್ಗೊಳ್ಳುತ್ತೇನೆ ಎಂದು ಸಂಸದ ಯದುವೀರ್‌ ಒಡೆಯರ್‌ ಹೇಳಿದ್ದಾರೆ.

ನಗರದಲ್ಲಿ ದೇವರಾಜ ಮಾರುಕಟ್ಟೆ ವರ್ತಕರಿಗೆ ಪಾಲಿಕೆ ನೋಟಿಸ್‌ ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೇವರಾಜ ಮಾರುಕಟ್ಟೆಯಲ್ಲಿ ಸಣ್ಣ ವ್ಯಾಪಾರಿಗಳು, ಬಡವರು ತಮ್ಮ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಈ ದೃಷ್ಠಿಯಿಂದ ನಾವು ಆದಷ್ಟು ಕಾಳಜಿ ವಹಿಸಿಕೊಂಡು ಕೆಲಸ ಮಾಡಬೇಕಾಗಿರುವುದು ಮುಖ್ಯ. ಪಾರಂಪರಿಕ ಕಟ್ಟಡವನ್ನು ಉಳಿಸಬೇಕಾಗಿರುವುದು ಕೂಡ ಮುಖ್ಯವಾಗಿರುವುದರಿಂದ ಆ ದೃಷ್ಠಿಯಿಂದಲೂ ಕೆಲಸ ಮಾಡಬೇಕಾಗಿದೆ. ನಗರ ಪಾಲಿಕೆ ಏನು ನಿರ್ಧಾರ ತೆಗೆದುಕೊಂಡಿದ್ದಾರೆ ಅದು ಕಾನೂನಾತ್ಕವಾಗಿದೆಯಾ ಎಂಬುವುದನ್ನ ಪರಿಶೀಲಿಸುತ್ತೇನೆ. ದೇವರಾಜಮಾರುಕಟ್ಟೆ ಉಳಿಸುವ ಹೋರಾಟದಲ್ಲಿ ನಾವು ಯಾವಾಗಲೂ ಪಾಲ್ಗೊಳ್ಳುತ್ತೇವೆ. ಮುಂದೆಯೂ ಕೂಡ ಅದನ್ನ ಉಳಿಸುವ ನಿಟ್ಟಿನಲ್ಲಿ ನಾವು ಕೂಡ ಕೆಲಸ ಮಾಡಬೇಕಾಗಿದೆ ಎಂದರು.

ಅಲ್ಲದೆ ನಿನ್ನೆ ಮೈಸೂರಿನ ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಟ್ಟಂತಹ ಪಾರಂಪರಿಕ ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಪಾರಂಪರಿಕ ಕಟ್ಟಡಗಳನ್ನ ಉಳಿಸುವ ನಿಟ್ಟಿನಿಂದ ಏನೇನು ಕೆಲಸ ಆಗಬೇಕಾಗಿದೆ ಅದರ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಪಾರಂಪರಿಕ ಕಟ್ಟಡ ಉಳಿಸಲು ಎಲ್ಲರು ಬೆಂಬಲ ಕೊಟ್ಟಿರುವುದು ಸಂತೋಷದ ವಿಷಯ.  ನಮ್ಮ ವಿವಿ ವ್ಯಾಪ್ತಿಯಲ್ಲಿ ೨೬ ಪಾರಂಪರಿಕ ಕಟ್ಟಡಗಳು ಇವೆ. ಹೀಗಾಗಿ ಅದನ್ನೆಲ್ಲಾ ಉಳಿಸಬೇಕಾಗಿರುವುದು ಬಹಳ ಮುಖ್ಯ ಎಂದು ಹೇಳಿದರು

Tags: