Mysore
18
clear sky

Social Media

ಮಂಗಳವಾರ, 27 ಜನವರಿ 2026
Light
Dark

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ: ನಾಳೆ ಅರಮನೆಗೆ ಗಜಪಡೆ ಎಂಟ್ರಿ

dasara

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಗಸ್ಟ್.‌4ರಂದು ಮೈಸೂರಿಗೆ ಆಗಮಿಸಿರುವ ಗಜಪಡೆ ನಾಳೆ ಅರಮನೆಗೆ ಪ್ರವೇಶ ಮಾಡಲಿವೆ.

ನಾಳೆ ಸಂಜೆ 6.45ರಿಂದ 7.20ರ ಗೋಧೊಳಿ ಲಗ್ನದಲ್ಲಿ ದಸರಾ ಗಜಪಡೆಗಳು ಅರಮನೆಗೆ ಎಂಟ್ರಿ ಆಗಲಿವೆ. ಅರಮನೆಯ ಪೂರ್ವ ದಿಕ್ಕಿನಲ್ಲಿರುವ ಜಯಮಾರ್ತಾಂಡ ದ್ವಾರದಿಂದ ಗಜಪಡೆಗಳು ಅರಮನೆ ಪ್ರವೇಶ ಮಾಡಲಿದ್ದು, ಈ ಕಾರ್ಯಕ್ರಮವನ್ನು ಸಾರ್ವಜನಿಕರು ಕೂಡ ಕಣ್ತುಂಬಿಕೊಳ್ಳಬಹುದಾಗಿದೆ.

ಈಗಾಗಲೇ ಅರಮನೆ ಆವರಣದಲ್ಲಿ ದಸರಾ ಗಜಪಡೆಗಳು, ಮಾವುತರು ಹಾಗೂ ಕಾವಾಡಿಗರ ವಾಸ್ತವ್ಯಕ್ಕೆ ಎಲ್ಲಾ ಸಿದ್ಧತೆ ಮಾಡಲಾಗಿದ್ದು, ನಾಳೆಯಿಂದ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಮುಗಿಯುವವರೆಗೂ ಗಜಪಡೆ ಅರಮನೆ ಆವರಣದಲ್ಲೇ ಬೀಡುಬಿಡಲಿವೆ.

Tags:
error: Content is protected !!