ಮೈಸೂರು: ವರ್ಕ್ ಫ್ರಂ ಹೋಂ ಕೆಲಸಕ್ಕೆ ಸೇರಿದ ಮಹಿಳೆ ನಂತರ ನಕಲಿ ಕಂಪೆನಿಯವರ ಮಾತನ್ನು ಕೇಳಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಮೂಲಕ 9.7 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.
ನಗರದ ರಾಜೇಂದ್ರನಗರದ ನಿವಾಸಿಯಾದ ಮಹಿಳೆಯು ಸಾಮಾಜಿಕ ಜಾಲತಾಣದ ಮೂಲಕ ಕಂಡುಬಂದ ಜಾಹೀರಾತನ್ನು ಗಮನಿಸಿದ್ದಾರೆ. ನಂತರ ಮನೆಯಲ್ಲಿಯೇ ಕೆಲಸ ಮಾಡಿ ವೇತನ ಪಡೆಯುವ ಕೆಲಸಕ್ಕೆ ಸೇರಿದ್ದಾರೆ.
ಮೊದಲಿಗೆ ಕಂಪೆನಿ ವತಿಯಿಂದ ಸಣ್ಣ ಪ್ರಮಾಣದ ವೇತನ ಪಡೆದಿದ್ದಾರೆ. ನಂತರ ಅಲ್ಲಿನ ನಯವಂಚಕರ ಮಾತನ್ನು ಕೇಳಿ ಹೆಚ್ಚಿನ ಹಣದಾಸೆಗೆ ಷೇರು ಮಾರುಕಟ್ಟೆಗೆ ಹಣ ಹೂಡಿಕೆ ಮಾಡಿದ್ದಾರೆ. ಹಂತಹಂತವಾಗಿ ಅವರು ಹೇಳಿದ ಖಾತೆಗೆ 9.7 ಲಕ್ಷ ರೂ. ಹಾಕಿ ವಂಚನೆಗೆ ಒಳಗಾಗಿದ್ದಾರೆ. ಈ ಸಂಬಂಧ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.




