ಮೈಸೂರು: ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಕೇವಲ ಮಹಿಳೆಯರದ್ದಷ್ಟೇ ಅಲ್ಲ, ಅದು ಇಡೀ ಸಮಾಜದ ಸಮಸ್ಯೆ ಎಂದು ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಹೇಳಿದರು.
ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೇಕ್ ಕಟ್ ಮಾಡಿ ಆಚರಿಸಿ ಬಳಿಕ ಮಾತನಾಡಿದ ಅವರು, ಮಹಿಳೆ ಕೇವಲ ಮಹಿಳೆಯಾಗಿರದೇ ಪುರುಷ ಪ್ರಧಾನ ಸಮಾಜದ ಚಲಾವಣೆ ವ್ಯಕ್ತಿಯಾಗಿದ್ದಾಳೆ ತಿಳಿಸಿದರು.
ಆಕೆ ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಮಗಳಾಗಿ ಮತ್ತು ಇತರೆಲ್ಲ ಸಂದರ್ಭದಲ್ಲಿ ಕಷ್ಟ ಸಹಿಷ್ಣುವಾಗಿ ಮನೆ ನಿಭಾಯಿಸುತ್ತಾಳೆ ಮತ್ತು ಕುಟುಂಬ ನಿರ್ವಹಣೆ ಮಾಡುತ್ತಾಳೆ. ಆದ್ದರಿಂದ ಆಕೆ ಎದುರಿಸುವ ಸಮಸ್ಯೆಗಳು ಕೇವಲ ಆಕೆಯದ್ದಲ್ಲ. ಅದು ಸಮಾಜದ್ದು ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಹಾಗೂ ಮುತ್ತಣ್ಣ,ರಶ್ಮಿ, ಮಮತಾ, ಭಾರತಿ, ಪೂಜಾ, ವೈಷ್ಣವಿ, ಉಮಾ, ಶಾರದಾ, ಅನಿತಾ, ಹಾಗೂ ಇನ್ನಿತರರು ಹಾಜರಿದ್ದರು