ಮೈಸೂರು : ಬಿಜೆಪಿ ಪಕ್ಷ ನನ್ನ ತಾಯಿ ಇದ್ದಂತ್ತೆ. ಯಾವುದೇ ಕಾರಣಕ್ಕೂ ಪಕ್ಷಕ್ಕಾಗಲಿ ಪಕ್ಕದವರಿಗಾಗಲಿ ದ್ರೋಹ ಮಾಡುವ ಮಾತೇ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಸಂಸದ್ ಪ್ರತಾಪ್ ಸಿಂಹ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಜಂಟಿ ಮಾಧ್ಯಮ ಸಂವಾದ ನಡೆಸಿ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷದ ಕಟಿಬದ್ಧ ಸೈನಿಕ. ಎಂದಿಗೂ ಪಕ್ಷಕ್ಕೆ ದ್ರೋಹ ಮಾಡುವ ಮಾತೇ ಬರುವುದಿಲ್ಲ ಎಂದರು.
ಮಹಾರಾಜರಾಗಿ ಯದುವೀರ್ ನಾಡಿಗೆ ಪರಿಚಿತರಾದವರು. ಬಿಜೆಪಿ ಅಭ್ಯರ್ಥಿಯಾಗಿ ಜನಕ್ಕೆ ಪರಿಚಿತರಾಗಬೇಕು. ಅವರ ಚಿಂತನೆ, ಆಲೋಚನೆ, ಈ ಕ್ಷೇತ್ರದ ಬಗ್ಗೆ ಇಟ್ಟುಕೊಂಡಿರುವ ಕನಸಿನ ಬಗ್ಗೆ ಜನರಿಗೆ ತಿಳಿಸಬೇಕಿದೆ ಮತ್ತು ಜನರ ಆಶಿರ್ವಾದವನ್ನು ಪಡೆಯಬೇಕಿದೆ ಎಂದು ತಿಳಿಸಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿ ದೊಡ್ಡದಾಗಿದೆ. ಹೀಗಾಗಿ ಸುಲಭಕ್ಕೆ ಮತದಾರರನ್ನುತಲುಪುವ ಏಕ ಮಾತ್ರ ಮಾರ್ಗ ಎಂದರೆ ಮಾಧ್ಯಮ ಹೀಗಾಗಿ ಮಾಧ್ಯಮದವರ ಸಹಕಾರ ತುಂಬಾ ಮುಖ್ಯವಾಗಿದೆ ಎಂದರು.
ನಮ್ಮ ಮಧ್ಯೆ ಯಾವುದೇ ಒಡಕು ಮೂಡಿಲ್ಲ: ಲೋಕಸಭಾ ಚುನಾವಣೆಗೆ ಪಕ್ಷ ಎದುವೀರ್ ಅವರನ್ನು ಆಯ್ಕೆ ಮಾಡಿದ ಕೂಡಲೆ ಅವರಿಗೆ ನಾನೇ ಕರೆ ಮಾಡಿ ನನ್ನ ಸಹಕರ ಹಾಗೂ ಬೆಂಬಲವನ್ನು ತಿಳಿಸಿದ್ದೇನೆ. ಹೀಗಾಗಿ ನಮ್ಮ ಮಧ್ಯೆ ಯಾವುದೇ ಬಿರುಕಾಗಲಿ, ಬೇಸರವಾಗಲಿ ಇಲ್ಲ ಎಂದು ಪ್ರತಾಪ್ ಸಿಂಹ, ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದರು.
ಶಾಸಕ ಶ್ರೀವತ್ಸ, ಮೈಸೂರು-ಕೊಡಗು ಬಿಜೆಪಿ ಲೋಕಸಭಾ ಅಭ್ಯರ್ಥಿ ಯದುವೀರ್, ಮಾಜಿ ಶಾಸಕ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಶಾಸಕ ಎಸ್.ಎ.ರಾಮದಾಸ್, ಬಿಜೆಪಿ ವಕ್ತಾರೆ ಮಾಳ್ವಿಕ ಅವಿನಾಶ್ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದರು.