ಎಚ್.ಡಿ.ಕೋಟೆ : ತಾಲ್ಲೂಕಿನ ಮಾದಾಪುರ ಸಮೀಪದ ರೈತರ ಜಮೀನಿನಲ್ಲಿ ಎರಡು ಕಾಡಾನೆಗಳು ಬೀಡು ಬಿಟ್ಟಿವೆ.
ಆನೆಗಳನ್ನು ಕಾಡಿಗೆ ಓಡಿಸುವ ಪ್ರಯತ್ನದ ಭಾಗವಾಗಿ ಮೈಸೂರು ಮನದವಾಡಿ ಮುಖ್ಯ ರಾಜ್ಯ ಹೆದ್ದಾರಿಯನ್ನ ಹಲವು ಗಂಟೆಗಳ ಕಾಲ ಬಂದ್ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಯತ್ನಪಟ್ಟರೂ ಸಹ ಆನೆಗಳು ರಸ್ತೆ ದಾಟದೆ ಜಮೀನಿನಲ್ಲಿಯೇ ಬಿಡು ಬಿಟ್ಟವು. ತಡ ರಾತ್ರಿಯವರೆಗೂ ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಹರಸಾಹಸ ಪಟ್ಟರು.
ಆನೆಗಳು ಕಾಡಿನಿಂದಹೊರ ಬಂದಿರುವ ಬಗ್ಗೆ ಗುರುವಾರ ಬೆಳಿಗ್ಗೆ ಮಾಹಿತಿ ಲಭಿಸಿತು. ಆನೆಗಳನ್ನ ಕಾಡಿಗೆ ಅಟ್ಟಲು ಇಲಾಖೆ ಎಲ್ಲಾ ರೀತಿ ಕ್ರಮ ಕೈಗೊಂಡಿದೆ. ಆನೆಗಳನ್ನು ಕಾಡಿಗೆ ಸೇರಿಸಲು ಯಶಸ್ವಿಯಾಗುತ್ತೇವೆ ಎಂದು ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಪೂಜಾ ತಿಳಿಸಿದರು.





