ಮೈಸೂರು: ಚಾಮರಾಜ ಕ್ಷೇತ್ರದ ವಿವಿಧ ಕಡೆಗಳಲ್ಲಿ ಪಾದಯಾತ್ರೆ ನಡೆಸಿದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿವಿಧ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ದೇವರಾಜ ಮೊಹಲ್ಲಾದಲ್ಲಿರುವ ಶ್ರೀ ಅಮೃತೇಶ್ವರ ದೇವಸ್ಥಾನ,ರಾಮಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಅರ್ಚಕರು ಯದುವೀರ್‌ಗೆ ಹಾರ ಹಾಕಿ ಆಶೀರ್ವಾದ ಮಾಡಿದರು.
ಸದ್ವಿದ್ಯಾಶಾಲೆಯ ಮುಂಭಾಗ ಶ್ರೀರಾಮನವಮಿ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಿ ಕೋಸುಂಬರಿ,ಪಾನಕ ವಿತರಿಸಲಾಗುತ್ತಿತ್ತು. ಈ ವೇಳೆ ತೆರೆದ ವಾಹನದಲ್ಲಿ ಪ್ರಚಾರದಲ್ಲಿ ತೊಡಗಿದ್ದಾಗ ಕಾರ್ಯಕರ್ತರು ನೀಡಿದ ಪಾನಕ,ಮಜ್ಜಿಗೆ ಸೇವನೆ ಮಾಡಿದರು. ಮತ್ತೊಂದು ಜಾಗದಲ್ಲಿ ಕಾರ್ಯಕರ್ತರಿಗೆ ಪಾನಕ ವಿತರಿಸಿ ಸಂಭ್ರಮಕ್ಕೆ ಕಾರಣರಾದರು.