Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನಂಜನಗೂಡಿನಲ್ಲಿ ಕೆಂಪೇಗೌಡರ ರಥಯಾತ್ರೆಗೆ ಬಿ.ಹರ್ಷವರ್ಧನ್ ಸ್ವಾಗತ

ನಂಜನಗೂಡು: ಬೆಂಗಳೂರಿನಲ್ಲಿ ನ.11ರಂದು ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿಗಳು ಅನಾವರಣಗೊಳಿಸಲಿದ್ದು, ಅದರ ಜೊತೆಗೆ ಕೆಂಪೇಗೌಡರ ಮಾಹಿತಿ, ಇತಿಹಾಸ ಸಾರುವ ಮ್ಯೂಸಿಯಂ ಕೂಡ ಸ್ಥಾಪನೆಯಾಗಲಿದೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.

ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಆಗಮಿಸಿದ ನಾಡಪ್ರಭು ಕೆಂಪೇಗೌಡರ ರಥ ಯಾತ್ರೆಯನ್ನು ಸ್ವಾಗತಿಸಿ ಬೀಳ್ಕೊಡುಗೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ದೂರದೃಷ್ಟಿಯಿಂದ ಅವರು ಬೆಂಗಳೂರು ಪೇಟೆಗಳನ್ನು ಕಟ್ಟಿ, ಕೆರೆ ಕಟ್ಟೆಗಳನ್ನು ಅಭಿವೃದ್ಧಿಪಡಿಸಿ ನಾಡಪ್ರಭುಗಳಾಗಿ ಆಡಳಿತ ನಡೆಸಿದವರು. ಅವರ ಅಮೂಲ್ಯ ಸೇವೆ ಇಂದು ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.

 ಇಂತಹವರ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 11 ರಂದು ಉದ್ಘಾಟಿಸಲಿದ್ದಾರೆ.
ಪ್ರತಿ ಗ್ರಾಮಗಳಿಂದಲೂ ಸ್ವಲ್ಪ ಪ್ರಮಾಣದ ಮಣ್ಣನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಕೆಂಪೇಗೌಡರ ಮ್ಯೂಸಿಯಂ ಆವರಣದಲ್ಲಿ ಉದ್ಯಾನವನ ನಿರ್ಮಾಣವಾಗಲಿದೆ. ಗುಜರಾತಿನಲ್ಲಿ ಸರ್ದಾರ್ ವಲ್ಲಭಬಾಯಿಪಟೇಲ್ ಪ್ರತಿಮೆಯ ರೀತಿಯಲ್ಲಿ ಅಭಿವೃದ್ಧಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಕಾಂಪೋಸ್ಟ್ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ಮಾಜಿ ಖಾದಿ ಮತ್ತು ಗ್ರಾಮೋದ್ಯೋಗ ಅದ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ, ನಗರಸಭಾಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ, ಮಾಜಿ ಪುರಸಭಾದ್ಯಕ್ಷ ಎಂ.ಶ್ರೀಧರ್, ವಿಚಾರ ವೇದಿಕೆಯ ಅಧ್ಯಕ್ಷ ಎಸ್.ಜಗದೀಶ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ನರಸಿಂಹಸ್ವಾಮಿ, ಮುಖಂಡ ಆನಂದ್, ನಗರಸಭಾ ಸದಸ್ಯರುಗಳಾದ ಮಹದೇವಮ್ಮ, ವಿಜಯಲಕ್ಷ್ಮಿ, ಶ್ವೇತಲಕ್ಷ್ಮಿ, ಸೌದೆ ಡಿಪೋ ನಾಗು, ರಂಗಸ್ವಾಮಿ, ತಹಶೀಲ್ದಾರ್ ಶಿವಮೂರ್ತಿ, ಶ್ರೀನಿವಾಸ್ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ