Mysore
28
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಯದುವೀರ್‌ ಒಡೆಯರ್‌ ಅವರಿಗೆ ಸಂಪೂರ್ಣ ಬೆಂಬಲ: ಜಿಲ್ಲಾ ವಕೀಲ ಸಂಘ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಗೆ ಬೆಂಬಲ ನೀಡಲಾಗುವುದು ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ. ಮಹದೇವಸ್ವಾಮಿ ಹೇಳಿದ್ದಾರೆ.

ಒಡೆಯರ್ ರಾಜಮನೆತನದದೊಂದಿಗೆ ವಕೀಲರ ಸಂಘ ಅವಿನಾಭಾವ ಸಂಬಂಧ ಹೊಂದಿದೆ. 2004ರಲ್ಲಿ ಸಂಸದರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಕೀಲರ ಸಂಘಕ್ಕೆ ರೂ. 10 ಲಕ್ಷ ದೇಣಿಗೆ ನೀಡಿದ್ದರು. ಮತ್ತು ಅದೇ ಹಣದಿಂದ ವಕೀಲರ ಸಂಘದ ಕಟ್ಟವನ್ನು ನಿರ್ಮಿಸಲಾಯಿತು ಎಂದು ಅವರು ನೆನೆದರು.

ನಾಲ್ವಡಿ ಕೃಷ್ಣರಾಜ್ ಒಡೆಯರ್ ಕಾಲದಿಂದಲೂ ಮೈಸೂರನ್ನು ಅಭಿವೃದ್ಧಿಪಡಿಸಿದ್ದು ಆ ಸಂಸ್ಥಾನದ ಮಹಾರಾಜರೇ. ಹಾಗೂ ಮೈಸೂರು ಕೋರ್ಟ್ ಕಟ್ಟಡ ಕೂಡಾ ಮಹಾರಾಜರ ದೇಣಿಗೆಯಾಗಿದೆ. ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ಮಹಾರಾಜರು ನೀಡಿರುವ ಕೊಡುಗೆ ಅಪಾರವಾಗಿದೆ. ಹಾಗಾಗಿ ವಕೀಲರ ಸಂಘದ ಎಲ್ಲ ಸದಸ್ಯರು ಪಕ್ಷಭೇದ ಮರೆತು ಯದುವೀರ್ ಯಶಸ್ಸಿಗೆ ಸಹಕರಿಸಲಿದ್ದಾರೆ ಎಂದು ವಕೀಲ ಸಂಘ ಹೇಳಿದೆ ಎಂದು ಟಿವಿ9 ವರದಿ ಮಾಡಿದೆ.

Tags: