Mysore
25
clear sky

Social Media

ಬುಧವಾರ, 17 ಡಿಸೆಂಬರ್ 2025
Light
Dark

ಮೋದಿಯೊಂದಿಗೆ ಸೇರಿ ಭಾರತ ಮಾತೆಯ ತೇರನ್ನು ಎಳೆಯೋಣ: ಯದುವೀರ್‌

ಮೈಸೂರು: ಶ್ರೇಷ್ಠ ಭಾರತ ನಿರ್ಮಾಣಕ್ಕಾಗಿ ಭಾರತೀಯರೆಲ್ಲರೂ ಒಗ್ಗೂಡಬೇಕಿದೆ. ಅಭಿವೃದ್ಧಿಯತ್ತ ಭಾರತ ಮಾತೆಯ ತೇರನ್ನು ಎಳೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯ ಅವರೊಂದಿಗೆ ಸೇರಿ ಭಾರತಮಾತೆಯ ತೇರನ್ನು ಎಳೆಯೋಣ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ನಗರದ ಖಾಸಗಿ ಕಾಲೇಜಿನಲ್ಲಿ ನಡೆದ ಚುನಾವಣೆ ಪ್ರಚಾರದಲ್ಲಿ ಮಾತನಾಡಿ, ನಾನು(ಯದುವೀರ್) ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದು, ನನಗೆ ನಿಮ್ಮ ಮತ ನೀಡುವ ಮೂಲಕ‌ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೈಬಲಪಡಿಸಿ ದೇಶದ ವಿಕಸಿತ ಸಂಕಲ್ಪಕ್ಕೆ ನಿಮ್ಮ ಕೊಡುಗೆ ನೀಡಿ ಎಂದರು.

ಕೇಂದ್ರ ಸರ್ಕಾರದ ಯೋಜನೆಗಳು ಹಿಂದುಳಿದವರು, ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿವೆ. ಅಂದಿನ ಮೈಸೂರು ಒಡೆಯರು ಅವರು ಬ್ರಾಂಡ್‌ ಮೈಸೂರು ಯೋಜನೆ ಮೂಲಕ, ಮೈಸೂರು ಕಾರ್ಖನೆ, ಮೈಸೂರು ಸಿಮೆಂಟ್‌, ಮೈಸೂರು ಸ್ಯಾಂಡಲ್‌ ಸೋಪ್‌ ಹೀಗೆ ಹತ್ತು ಹಲವು ಯೋಜನೆಗಳಿದ್ದವು. ಇದೇ ರೀತಿ ಮೋದಿಯವರು ಮೇಕ್‌ ಇನ್‌ ಇಂಡಿಯಾ ಮೂಲಕ ಸ್ವದೇಶಿ ವಸ್ತುಗಳಿಗೆ ಒತ್ತು ನೀಡಿ ಭಾರತೀಯರಿಗೆ ಶಕ್ತಿ ತುಂಬುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಪ್ರಾಚೀನ ಭಾರತದ ಕುರುಹುಗಳನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರ ಸಫಲವಾಗಿದೆ. ಮೈಸೂರು ಪರಂಪರೆ ಉಳಿಯಬೇಕು. ಅರಮನೆಯ ಸಾಂಸ್ಕೃತಿಕ ಕುರುಹುಗಳು ಉಳಿಸಿಕೊಂಡು ಬಂದಿದ್ದೇವೆ. ಇದಕ್ಕೆ ಕೇಂದ್ರದ ಯೋಜನೆಗಳು ಪೂರಕವಾಗಿವೆ ಎಂದರು.

ಅರಮನೆಯ ರಾಜವಂಶಸ್ಥ ಪಟ್ಟ ವಹಿಸಿಕೊಂಡ ಬಳಿಕ ಮೈಸೂರು ಭಾಗದ ಜನರು ನನ್ನನ್ನು ಮನೆ ಮಗನ ರೀತಿ ನೋಡಿಕೊಂಡಿದ್ದೀರಿ. ನಿಮ್ಮ ಸೇವೆ ಮಾಡಿ ನಿಮ್ಮ ಋಣ ತೀರಿಸುತ್ತೇನೆ. ನನಗೆ ಮತ ನೀಡಿ ಎಂದು ಮನವಿ ಮಾಡಿದರು.

Tags:
error: Content is protected !!