Mysore
16
scattered clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಮಾ.22ಕ್ಕೆ ಕನ್ನಡ ಪರ ಸಂಘಟನೆಗಳಿಂದ ಕರ್ನಾಟಕ ಬಂದ್‌ನ್ನು ಯಶಸ್ವಿ ಮಾಡುತ್ತೇವೆ: ವಾಟಾಳ್‌ ನಾಗರಾಜ್‌

ಮೈಸೂರು: ಇದೇ ಮಾರ್ಚ್‌.22ಕ್ಕೆ ಕರ್ನಾಟಕ ಬಂದ್‌ ಇರುವ ಹಿನ್ನೆಲೆ ಈಗಾಗಲೇ ಬಹುತೇಕ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದ್ದು, ಕನ್ನಡಿಗರ ಗೌರವ ಸ್ವಾಭಿಮಾನಕ್ಕೆ, ಕನ್ನಡಕ್ಕಾಗಿ ಅಂದು ಬಂದ್‌ ಅನ್ನು ಯಶಸ್ವಿ ಮಾಡೇ ಮಾಡುತ್ತೇವೆ ಎಂದು ಕನ್ನಡ ಪರ ಚಳುವಳಿ ಹೋರಾಟಗಾರ ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು(ಮಾರ್ಚ್.19) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮರಾಠಿಗರ ಪುಂಡಾಟಿಕೆ, ಮರಾಠಿಗರ ಅಟ್ಟಹಾಸ, ಎಂ.ಇ.ಎಸ್ ನಿಷೇಧ ಮಾಡಬೇಕು. ಕಳಸಾ-ಭಂಡೂರಿ ಮಹದಾಯಿ ಯೋಜನೆ ಕೂಡಲೇ ಆರಂಭಿಸಬೇಕು. ಹಿಂದಿ ಹೇರಿಕೆ ಬೇಡವೇ ಬೇಡ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಾಗಬೇಕು. ಕನ್ನಡ ಕಂಡಕ್ಟ‌ರ್ ಮೇಲೆ ಮರಾಠಿಗರ ದಾಳಿ ಸಮಗ್ರವಾಗಿ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಮೇಕೆದಾಟು ಬಗ್ಗೆ ತಮಿಳುನಾಡು ವಿರೋಧ, ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಮಾರ್ಚ್.22 ರಂದು ಕರ್ನಾಟಕ ಬಂದ್ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್ ಮಾಡಲಾಗುವುದು. ಹಾಗಾಗಿ ಕನ್ನಡಿಗರು ಈ ಬಂದ್‌ಗೆ ಕೈ ಜೋಡಿಸಬೇಕು. ಸಮಗ್ರ ಕನ್ನಡಿಗರಿಗಾಗಿ, ಕನ್ನಡಿಗರ ಗೌರವ ಸ್ವಾಭಿಮಾನಕ್ಕೆ, ಕನ್ನಡಕ್ಕಾಗಿ ಕರ್ನಾಟಕ ಬಂದ್ ಮಾಡಲಾಗುತ್ತಿದೆ ಎಂದರು.

ಈ ಬಂದ್‌ ಅನ್ನು ಬೆಳಗಾವಿಯಿಂದ ಚಾಮರಾಜನಗರವರೆಗೂ ಆಚರಿಸಲಾಗುವುದು. ಬೆಳಗಾವಿ ಕನ್ನಡಿಗರ ಕೈಯಲ್ಲಿ ಇಲ್ಲ ಮರಾಠಿಗರ ಕೈಯಲ್ಲಿ ಇದೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಬೇಕಾಗಿಲ್ಲ ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಎಂಇಎಸ್ ಇರಬಾರದು, ಬೆಳಗಾವಿ ಉಳಿಸಬೇಕು. ಕಿಡಿಗೇಡಿಗಳು ಬಸ್ ಚಾಲಕರಿಗೆ ಕನ್ನಡದ ಭೂಮಿಯಲ್ಲಿ ಚಾಲಕರಿಗೆ ಹೊಡೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಂದ್‌ ಹಿನ್ನೆಲೆ ಚಾಲಕರು ಯಾವುದೇ ವಾಹನಗಳನ್ನು ಚಾಲನೆ ಮಾಡಬಾರದು. ನಮ್ಮ ರಾಜ್ಯಪಾಲರಾಗಲಿ, ಮುಖ್ಯಮಂತ್ರಿಯಾಗಲಿ ಅಥವಾ ಯಾವುದೇ ಸಚವರಾಗಲಿ ಚಾಲಕರು ಕಾರಿನಲ್ಲಿ ಕುಳಿತುಕೊಳ್ಳಬಾರದೆಂದು ಕನ್ನಡ ಪರ ಸಂಘಟನೆಗಳ ಪರವಾಗಿ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.

ಇನ್ನು ಕರ್ನಾಟಕ ಬಂದ್‌ ಆಚರಣೆ ಮಾಡುವ ಪ್ರಯುಕ್ತ ಕನ್ನಡ ಚಿತ್ರರಂಗ ಸಂಪೂರ್ಣ ಬಂದ್ ಆಗುತ್ತದೆ ಎಂದು ನಂಬಿದ್ದೇನೆ. ಈ ಬಂದ್‌ಗೆ ಸ್ಯಾಂಡಲ್‌ವುಡ್‌ ನಟ ಮತ್ತು ನಟಿಯರು ಆಗಮಿಸಿ ಬೆಂಬಲ ನೀಡಬೇಕು. ಅಲ್ಲದೇ ಪರ ಭಾಷೆ ಚಿತ್ರಗಳನ್ನು ಬಹಿಷ್ಕಾರ ಹಾಕಬೇಕಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಮಲಗಿದೆ, ವರ್ಷದಲ್ಲಿ ಮೂರು ದಿನ ಒಬ್ಬಟ್ಟು ಊಟ ಮಾಡಿ ಮಲಗುತ್ತಾರೆ. ಹಾಗಾಗಿ ಸಾಹಿತಿಗಳು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

Tags:
error: Content is protected !!