Mysore
30
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ವಕ್ಫ್‌ ವಿವಾದ: ಸಿಎಂ ತವರು ಜಿಲ್ಲೆಯ ನಿವಾಸಿಗಳೊಂದಿಗೆ ವಿಪಕ್ಷ ನಾಯಕ ಆರ್‌.ಅಶೋಕ್‌ ಸಮಾಲೋಚನೆ

ಮೈಸೂರು: ಬಿಜೆಪಿ ವಕ್ಫ್‌ ಹೋರಾಟ ಹಿನ್ನೆಲೆಯಲ್ಲಿ ವಿರೋಧ ಪಕ್ಷ ನಾಯಕ ಆರ್‌.ಅಶೋಕ್‌ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಗೆ ಭೇಟಿ ನೀಡಿ ಅಲ್ಲಿಯ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಮೈಸೂರಿನಲ್ಲಿ ಇಂದು(ಡಿ.2) ಗುಂಡುರಾವ್‌ ನಗರಕ್ಕೆ ಭೇಟಿ ನೀಡಿ ಅಲ್ಲಿಯ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ವಕ್ಫ್‌ ಮಂಡಳಿ ಕ್ಯಾನ್ಸರ್‌ ರೀತಿಯಿದ್ದಂತೆ. ಈ ಮಂಡಳಿ ರಾಜ್ಯದ  ರೈತರ ಜಮೀನು, ಎಸ್‌ಸಿ, ಎಸ್‌ಟಿ ಜಮೀನು ಹಾಗೂ ಮಠ-ಮಾನ್ಯಗಳ ಆಸ್ತಿಗಳ ಮೇಲೆ ವಕ್ಫ್‌ ಬೋರ್ಡ್‌ ಎಂದು ದಾಖಲಿಸಲು ಹೊರಟಿದೆ. ಈ ಹಿಂದೆ ಉಳುವವನೆ ಭೂಮಿ ಒಡೆಯ ಎಂಬ ಹೇಳಿಕೆಯನ್ನು ನೀಡಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೆಸ್‌ ಸರ್ಕಾರ ಇಂದಿನ ದಿನಗಳಲ್ಲಿ ಆ ಆಸ್ತಿ ವಕ್ಫ್‌ ಬೋರ್ಡ್‌ ಎಂದು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವಕ್ಫ್‌ ಮಂಡಳಿ ಅವರು ಮೈಸೂರು ತಾಲ್ಲೂಕಿನಲ್ಲಿ 44 ಸಾವಿರ ಎಕರೆಗೂ ಅಧಿಕ ಆಸ್ತಿಯನ್ನು ವಕ್ಫ್‌ ಬೋರ್ಡ್‌ ಆಸ್ತಿಯೆಂದು ಹೇಳುತ್ತಿದ್ದಾರೆ. ಅಲ್ಲದೇ ಕಸಬಾ ಹೋಬಳಿಯ ಸರ್ವೇ ನಂಬರ್‌ 153ರಲ್ಲಿ 1.38 ಎಕರೆ ಆಸ್ತಿಯನ್ನು ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಅಭಿವೃದ್ದಿ ಮಾಡಲಾಗಿದೆ . ಆದರೆ ಇದೀಗ ಆ ಜಮೀನಿಗೂ ಸಹ ನೋಟಿಸ್‌ ನೀಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ ಎಂದಿದ್ದಾರೆ.

ಇನ್ನು ಸರ್ವೇ ನಂಬರ್‌ 168ರಲ್ಲಿ ಬೇಲಿ ಹಾಕಿಕೊಂಡಿದ್ದು, ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ. ಹೀಗಿದ್ದರೂ ಆ ಸ್ಥಳದಲ್ಲಿ ಮಸೀದಿ ನಿರ್ಮಾಣ ಮಾಡಿ ಆಜಾನ್ ಎಂದು ಕೂಗಾಲಾಗುತ್ತಿದೆ. ಈ ವಿಚಾರವಾಗಿ ಗುಂಡುರಾವ್‌ ನಗರದ ಜನತೆ ಇಂದು ಬೀದಿಗೆ ಬರುವಂತಾಗಿದೆ. ಹೀಗಾಗಿ ಕಾಂಗ್ರೆಸ್‌  ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗನಿಂದ ಇತಂಹ ಸಮಸ್ಯೆಗಳು ಎದುರಾಗಿದೆ ಎಂದು ಹೇಳಿದ್ದಾರೆ.

ಸರ್ಕಾರ ಮೊದಲು ರೈತರನ್ನು ವಕ್ಫ್‌ ಬೋರ್ಡ್‌ ಮುಂದೆ ನಿಲ್ಲಿಸುವ ಕೆಲಸವನ್ನು ಬಿಡಬೇಕು. ಮಠ-ಮಾನ್ಯಗಳ ಭೂ ಕಬಳಿಕೆಯನ್ನು ಕೈ ಬಿಡಬೇಕು. ಈ ವಕ್ಫ್‌ ಬೋರ್ಡ್‌ ಆಸ್ತಿ ಬದಲಾವಣೆಗೆ ಮುಖ್ಯವಾಗಿ ಜಮೀರ್‌ ಅಹಮ್ಮದ್‌ ಕಾರಣವಾಗಿದ್ದಾರೆ. ಅವರಿಂದ ಇಡೀ ರಾಜ್ಯದ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಹೀಗಾಗಿ ವಕ್ಫ್‌ ಮಂಡಳಿ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯತ್ತದೆ ಎಂದು ತಿಳಿಸಿದ್ದಾರೆ.

Tags: