ಮೈಸೂರು : ಲೋಕಸಭಾ ಚುನಾವಣೆಯ ದಿನವಾದ ಇಂದು ರಾಜ್ಯದ ೧೪ ಕ್ಷೇತ್ರದಲ್ಲಿ ಮೊದಲನೆ ಹಂತದ ಮತದಾನ ನಡೆಯುತ್ತಿದೆ.
ಈ ವೇಳೆ ನಗರದಲ್ಲಿ ವಿವಿಧ ಮಠಾಧೀಶರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಜಿಗಳವರು ಇಂದು ಸುತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುತ್ತೂರು ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಳಿಕ ಪ್ರಜಾಪ್ರಭುತ್ವವನ್ನು ಉಳಿಸಿ ಇದು ನಮ್ಮೆಲ್ಲರ ಹಕ್ಕು ಎಂದು ಸಾರ್ವಜನಿಕರಿಗೆ ಸಂದೇಶ ಸಾರಿದರು.
ನಗರದ ಅವದೂತ ದತ್ತಪೀಠದ ಹಿರಿಯ ಪೀಠಾಧಿಪತಿಗಳಾದ ಗಣಪತಿ ಸಚ್ಚಿದಾನಂದಾ ಸ್ವಾಮೀಜಿ ಹಾಗೂ ಬಾಲ ಸ್ವಾಮೀಜಿಗಳಾದ ದತ್ತ ವಿಜಯಾನಾಂದ ತೀರ್ಥ ಸ್ವಾಮೀಜಿಗಳು ಊಟಿ ರಸ್ತೆಯ ಜೆಎಸ್ಎಸ್ ಕಾಲೇಜಿನ ಬೂತ್ ನಂಬರ್ 237ರಲ್ಲಿ ತಮ್ಮ ಮತ ಚಲಾಯಿಸಿದರು.

ಮೈಸೂರ್ ನಗರ ಬಿಜೆಪಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎಲ್ ನಾಗೇಂದ್ರ ಅವರು ಒಂಬತ್ತು ಗಂಟೆಗೆ ಜಯನಗರದ ಬಾಲೋಧ್ಯಾನ ಇಂಗ್ಲಿಷ್ ಶಾಲೆಯಲ್ಲಿ ತಮ್ಮ ಮತ ಚಲಾಯಿಸುವರು.
ಇನ್ನು ಕೆ.ಅರ್.ಕ್ಷೇತ್ರದ.ಶಾಸಕರಾದ ಟಿ.ಎಸ್.ಶ್ರೀವತ್ಸ ರವರು ಸರತಿ ಸಾಲಿನಲ್ಲಿ ನಿಂತು ಬೆಳ್ಳಗೆ 7.30 ಕ್ಕೆ ವಾರ್ಡ್ ನಂಬರ್ 51 ಬೂತ್ ನಂಬರ್ 139 (ಸಂಸ್ಕೃತ ಪಾಠಶಾಲೆಯಲ್ಲಿ) ಮತದಾನ ಮಾಡಿದರು.
ಚಿತ್ರ ನಟಿ ಹಾಗೂ ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ನಗರದ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಮತದಾನ ಮಾಡಿದರು.




