ಮೈಸೂರು: ಮೈಸೂರಿನ ವಿನಾಯಕ ನಗರದಲ್ಲಿರುವ ವಿನಾಯಕ ದೇವಸ್ಥಾನಕ್ಕೆ ನಿನ್ನ ರಾತ್ರಿ ವೇಳೆ ಕಳ್ಳರ ಗುಂಪೊಂದು ಕನ್ನ ಹಾಕಿದ್ದಾರೆ. ದೇವಸ್ಥಾನದ ಕಿಟಕಿ ಗಾಜು ಒಡೆದು ಲಕ್ಷ್ಮಿ ದೇವಿಯ ಚಿನ್ನದ ತಾಳಿ ಸೇರಿದಂತೆ ಬೆಲೆಬಾಳುವ ವಿಗ್ರಹಗಳನ್ನು ಕಳ್ಳತನ ಮಾಡಲಾಗಿದೆ. ವಿಷ್ಣು, ಗಣಪತಿ, ಮಹಾಲಕ್ಷ್ಮೀ, ಕೃಷ್ಣ, ಶಿವನವಿಗ್ರಹಗಳನ್ನು ಕದ್ದು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ವಿವಿ ಪುರಂ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.