ಮೈಸೂರು: ಕ್ರೀಡಾ ಪಟುಗಳು ಸಮಯ ಪ್ರಜ್ಞೆ ಹೊಂದಿದ್ದರೆ ಯಾವುದೇ ಕ್ರೀಡೆಯಲ್ಲಾದರು ಜಯಗಳಿಸಬಹುದು ಎಂದು ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಕ್ರೀಡಪಟು ಎಂ.ಸಹನಾ ಹೇಳಿದರು.
ಜ್ಯೋತಿನಗರದ ಡಿ.ಎ.ಆರ್. ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾಪಟುಗಳು ತಮಗೆ ತಾವೇ ಪ್ರೇರಣೆ ಪಡೆದುಕೊಂಡು ನಿರಂತರ ಪ್ರಯತ್ನ ಮಾಡಿದರೆ ಕ್ರೀಡೆಯಲ್ಲಿ ಯಶಸ್ಸು ಕಟಿಟ್ಟ ಬುತ್ತಿ ಎಂದು ತಮ್ಮ ಸಾಧನೆಯ ಹಾದಿಯನ್ನು ತಿಳಿಸಿದರು.
ನಮ್ಮ ತಂದೆಯಾದ ನಿವೃತ್ತ ಎ.ಎಸ್.ಐ ಮಹದೇವಯ್ಯ ಅವರು ಕೆಲಸ ನಿರ್ವಹಿಸಿದ ಸ್ಥಳದಲ್ಲಿ ನಾನು ಮುಖ್ಯ ಅತಿಥಿಯಾಗಿ ಬಂದಿರುವುದು ತುಂಬ ಸಂತೋಷವಾಗುತ್ತಿದೆ ಎಂದ ಸಹಾನ ಅವರು, ತಮ್ಮ ತಾಯಿ, ಸಹೋದರ ಹಾಗೂ ಕ್ರೀಡಾ ಗುರುಗಳಿಗೆ ಧನ್ಯವಾದ ಹೇಳಿದರು.
ಪೊಲೀಸ್ ವಾರ್ಷಿಕ ಕ್ರೀಡಾ ಕಾರ್ಯಕರ್ಮದಲ್ಲಿ ಪುರುಷರ ನಾನೂರು ಮೀಟರ್ ಹಾಗೂ ಮಹಿಳೆಯರ ನೂರು ಮೀಟರ್ ಓಟದ ಸ್ಪರ್ಧೆಗೆ ಚಾಲನೆ ನೀಡಿದರು. ಓಟದ ಸ್ಪರ್ಧೆಯಲ್ಲಿ ವಿಜೇತರಾದ ಪುರುಷ ಹಾಗೂ ಮಹಿಳಾ ಪೊಲೀಸರಿಗೆ ಪ್ರಥಮ ದ್ವಿತೀಯ ಹಾಗೂ ತೃತ್ತೀಯವಾಗಿ ಪದಕಗಳನ್ನು ನೀಡಿ ಗೌರವಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.ಎನ್ ವಿಷ್ಣುವರ್ಧನ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.





