Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕುಣಿಗಾಲ್ ಕುದುರೆ ಫಾರಂ ಪರಭಾರೆ ವಿರೋಧಿಸಿ ವಾಟಾಳ್‌ ನಾಗರಾಜ್‌ ಪ್ರತಿಭಟನೆ!

ಮೈಸೂರು: ಕುಣಿಗಾಲ್ ಕುದುರೆ ಫಾರಂ ಅನ್ನು ಪರಭಾರೆ ಮಾಡದೆ ಅಲ್ಲಿಯೇ ಉಳಿಸುವಂತೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

ಜೋಡಿ ಕುದುರೆ ಸಾರೋಟಿನಲ್ಲಿ ನಗರದ ಹಾರ್ಡಿಂಜ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಕುಣಿಗಲ್ ಫಾರಂಗೆ 400 ವರ್ಷಗಳ ಇತಿಹಾಸ ಇದ್ದು, ಇಲ್ಲಿ ಯಾವುದೇ ಕಾರಣಕ್ಕೂ ನಗರ ನಿರ್ಮಾಣ ಮಾಡಬಾರದು.

ಆಂಗ್ಲರು, ಟಿಪ್ಪು ಸುಲ್ತಾನ್ ಮೈಸೂರು ಅರಸರ ಆಳ್ವಿಕೆ ನೆನಪಿಸುತ್ತದೆ. ಕುಣಿಗಲ್ ಫಾರಂಗೆ ವಿಶ್ವದ ಮಾನ್ಯತೆ ಇದೆ. ಇಂತಹ ಫಾರಂ ಉಳಿಸಿಕೊಳ್ಳುವುದು ಸರಕಾರದ ಆದ್ಯ ಕರ್ತವ್ಯ. ಕುಣಿಗಲ್ ಕುದುರೆ ಫಾರಂ ಅನ್ನು ವಿಶ್ವದ ಜನ ಬಂದು ನೋಡುವಂತಹ ಸ್ಮಾರಕವಾಗಿ ಮಾಡಬೇಕು ಎಂದು ಒತ್ತಾಯಿಸಿದರು.

1992ರಲ್ಲಿ ಮಲ್ಯನ ಯುಬಿ ಸಂಸ್ಥೆಗೆ ಕೊಟ್ಟಾಗ ನಾನು ವಿರೋಧ ಮಾಡಿದ್ದೆ. ಆದರೆ, ಪರಭಾರೆ ಮಾಡಲು ಭಾರಿ ಕರಾಮತ್ತು ಇದೆ. 100 ಎಕರೆ ಬೆಂಗಳೂರು ಟರ್ಫ್ ಕ್ಲಬ್‌ಗೆ ಹಾಗೂ 321 ಎಕರೆ ಟೌನ್‌ ಷಿಪ್‌ ಗೆ ಬಳಸುವ ಪ್ರಸ್ತಾಪ ಇದೆ.

ಈ ಬಗ್ಗೆ ಜ.16ರಂದು ಬೆಂಗಳೂರಿನಲ್ಲಿ ಕುಣಿಗಲ್ ಕುದುರೆ ಫಾರಂ ಉಳಿಸಿ ಎಂದು ಹೋರಾಟ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

 

ಸಂಸದ ಅನಂತ್ ಕುಮಾರ್ ಹೆಗಡೆ ಸಿಎಂ ವಿರುದ್ಧ ಏಕವಚನದಲ್ಲಿ ಮಾತನಾಡಿರುವ ಕುರಿತು ಪ್ರತಿಕ್ರಿಯಿಸಿ, ಹೆಗಡೆಯವರು ಎಂಪಿ ಆಗಿದ್ದಾರೆ. ನಾನು 65 ವರ್ಷಗಳ ರಾಜಕಾರಣದಲ್ಲಿ ನಿಜಲಿಂಗಪ್ಪ, ಜೆ.ಎಚ್.ಪಟೇಲ್, ಗುಂಡೂರಾವ್, ಬಂಗಾರಪ್ಪ, ರಾಮಕೃಷ್ಣ ಹೆಗಡೆ ಅವರಂತಹ ರಾಜಕಾರಣಿಗಳನ್ನು ನೋಡಿದ್ದೇನೆ. ಆದರೆ ಯಾವ ರಾಜಕಾರಣಿಯೂ ಇಷ್ಟೊಂದು ಲಘುವಾಗಿ ಮಾತನಾಡಿಲ್ಲ. ವೈಯಕ್ತಿಕ ವಿಚಾರ ಹಾಗೂ ದ್ವೇಷದಿಂದ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ಅಪಮಾನವಲ್ಲ, ರಾಜ್ಯದ ಜನರಿಗೆ ಮಾಡಿದ ಅಪಮಾನ. ಟೀಕೆ ಮಾಡಿ, ಆದರೆ ವೈಯಕ್ತಿಕ ದ್ವೇಷದಿಂದ ಟೀಕೆ ಮಾಡಬಾರದು.

– ವಾಟಾಳ್‌ ನಾಗರಾಜ್‌

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ