Mysore
34
scattered clouds

Social Media

ಸೋಮವಾರ, 30 ಮಾರ್ಚ್ 2026
Light
Dark

ನಂಜನಗೂಡು| ನಂಜುಂಡೇಶ್ವರನ ದೊಡ್ಡ ಜಾತ್ರೆಯಲ್ಲಿ ಕಾಲ್ತುಳಿತ: ಇಬ್ಬರಿಗೆ ಗಾಯ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಜರುಗಿದ ಗೌತಮ ಪಂಚಮಹಾರಥೋತ್ಸವದಲ್ಲಿ ಕಾಲ್ತುಳಿತ ಸಂಭವಿಸಿದ ಪರಿಣಾಮ ಇಬ್ಬರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.

ನಂಜನಗೂಡಿನ ಶ್ರೀರಾಂಪುರ ಬಡಾವಣೆಯ 52 ವರ್ಷದ ರಂಗಸ್ವಾಮಿಯ ಹಾಗೂ ಆತನ ಪುತ್ರ ಅಪ್ಪು ಎಂಬುವವರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಮಾಹಿತಿ ಪ್ರಕಾರ ಈಗ ಇಬ್ಬರೂ ಪ್ರಾಥಮಿಕ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ 1999ರಲ್ಲಿ ರಥದ ಚಕ್ರಕ್ಕೆ ಸಿಲುಕಿ ಒಬ್ಬ ಮೃತಪಟ್ಟು, ಮೂವರು ಕಾಲು ಕಳೆದುಕೊಂಡಿದ್ದರು. ಇಂದು ನಡೆದ ದೊಡ್ಡ ಜಾತ್ರೆಯ ಸಂದರ್ಭದಲ್ಲಿ ಭಕ್ತರ ಕಾಲ್ತುಳಿತದಿಂದ ಅಪ್ಪ ಮಗ ಸಿಲುಕಿ ಮತ್ತೆ ಅವಘಡಕ್ಕೆ ಕಾರಣವಾಗಿದೆ.

 

Tags:
error: Content is protected !!