ಮೈಸೂರು : ನಂಜನಗೂಡು ತಾಲೂಕಿನ ಸುತ್ತೂರು ಜಾತ್ರಾ ಮಹೋತ್ಸವದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ವಾಪಸ್ ತೆರಳುತ್ತಿದ್ದ ವೇಳೆ ಅವರ ವಾಹನ ಭಾರೀ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿತು. ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿ ವಾಹನಗಳು ಸ್ಥಗಿತಗೊಂಡಿದ್ದರಿಂದ ಮುಖ್ಯಮಂತ್ರಿ ಕಾರಿಗೆ ದಾರಿ ಮಾಡಲು ಪೊಲೀಸ್ ಅಧಿಕಾರಿಗಳು ತೀವ್ರ ಹರಸಾಹಸ ನಡೆಸಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮಲ್ಲಿಕಾರ್ಜುನ ಬಾಲದಂಡಿ ಅವರು ಸ್ವತಃ ರಸ್ತೆಗಿಳಿದು ವಾಹನಗಳನ್ನು ಕ್ಲಿಯರ್ ಮಾಡುವ ಕಾರ್ಯಕ್ಕೆ ಮುಂದಾದರು. ಟ್ರಾಫಿಕ್ ತೆರವುಗೊಳಿಸುವಾಗ ಒಬ್ಬ ಬೈಕ್ ಸವಾರ ಮಧ್ಯದಲ್ಲಿ ಬಂದು ಅಡ್ಡಿಯಾದಾಗ ಎಸ್‌ಪಿ ಅವರು ಕ್ಷಣಿಕವಾಗಿ ಕೋಪಗೊಂಡು ಅವರ ಕಾಲಿನಿಂದ ಒದೆಯಲು ಮುಂದಾದರು. ಆದರೆ ಕೊನೆ ಕ್ಷಣದಲ್ಲಿ ಎಸ್‌ಪಿ ಸ್ವಯಂ ಸಂಯಮ ಕಾಯ್ದುಕೊಂಡು ಒದೆಯದೆ ಸುಮ್ಮನಾದರು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.





