Mysore
24
mist

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಮೈಸೂರು | ನಾಳೆ(ಆ.17) ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿ

karate

ಮೈಸೂರು : ನ್ಯಾಷನಲ್ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ(ಎನ್‌ಕೆಎ) ವತಿಯಿಂದ ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್‌ಶಿಪ್-2025 ಪಂದ್ಯಾವಳಿಯನ್ನು ಆ.17ರಂದು ನಗರದ ಚಾಮುಂಡಿವಿಹಾರ ಕ್ರೀಡಾಂಗಣದ ಒಳಾಂಗಣದಲ್ಲಿ ಆಯೋಜಿಸಲಾಗಿದೆ.

ಪಂದ್ಯಾವಳಿಗೂ ಮುನ್ನ ನಡೆಯುವ ಕಾರ್ಯಕ್ರಮವನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸುವರು. ಪಂದ್ಯಾವಳಿಯನ್ನು ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಮಲ್ಲಿಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಹಿರಿಯ ಪತ್ರಕರ್ತ ಸಿ.ಕೆ.ಮಹೇಂದ್ರ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಕಾರ್ಲ್ಸ್‌ಬರ್ಗ್ ಇಂಡಿಯಾ ಸಂಸ್ಥೆಯ ಬ್ರೆವರಿ ವಿಭಾಗದ ಮುಖ್ಯಸ್ಥ ಮಯಂಕ್ ಗೌರ್ ಮತ್ತು ಎಸ್‌ಪಿಆರ್ ಅಭಿನ್‌ಬೆವ್ ಇಂಡಿಯಾ ಸಂಸ್ಥೆಯ ಲಾಜಿಸ್ಟಿಕ್ಸ್ ವಿಭಾಗದ ಹಿರಿಯ ವ್ಯವಸ್ಥಾಪ ರಾಧಾಕೃಷ್ಣನ್ ತೃಪ್ತಿ ಪಾಲ್ಗೊಳ್ಳಲಿದ್ದಾರೆ.

ಅತಿಥಿಗಳಾಗಿ ಎಕೆಎಸ್‌ಕೆಎ ರೆಫರಿ ಕಮಿಷನ್ ಛೇರ್ಮನ್ ಎನ್.ಜಿ.ಶಿವದಾಸ್, ಕಾರ್ಯದರ್ಶಿ ಭಾರ್ಗವ್ ರೆಡ್ಡಿ, ಬೆಂಗಳೂರಿನ ಸುರೇಶ್ ಕೆನಿಚಿರಾ, ಅಡ್ವೊಕೇಟ್ ಎಸ್.ಉಮೇಶ್ ಮತ್ತು ನಾಗಾ ಮಾರ್ಷಿಯಲ್ ಆರ್ಟ್ಸ್ ಅಕಾಡೆಮಿ ಅಧ್ಯಕ್ಷ ಸೋಸಲೆ ಎಂ. ಸಿದ್ದರಾಜು ಭಾಗವಹಿಸಲಿದ್ದು, ಎನ್‌ಕೆಎ ಸಂಸ್ಥಾಪಕ ಅಧ್ಯಕ್ಷ ಎನ್.ಶಂಕರ್ ಉಪಸ್ಥಿತರಿರುವರು.

Tags:
error: Content is protected !!