Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

BJP v/s BJP : ಚಾಮುಂಡಿ ದರ್ಶನ ಪಡೆದ ವಿಜಯೇಂದ್ರ ಬಣ

ಮೈಸೂರು:  ಬಿಜೆಪಿಯಲ್ಲಿ ಬಣ ಬಡಿದಾಟ ತೀವ್ರಗೊಂಡಿದ್ದು, ಅತ್ತ  ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ ಶಮನಕ್ಕೆ ದೂರದ ದೆಹಲಿಗೆ ತೆರಳಿದ್ದಾರೆ. ಇತ್ತ ಅದೇ ಬಣ ಎಂ.ಪಿ ರೇಣುಕಾಚಾರ್ಯ ನೇತೃತ್ವದಲ್ಲಿ  ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ಶಕ್ತಿ ಪ್ರದರ್ಶನ ನಡೆಸಿತು.

ಶನಿವಾರ  ಚಾಮುಂಡಿ ಭೇಟಿ ನೀಡಿದ  ವಿಜಯೇಂದ್ರ ಬಣದ 38 ಮಾಜಿ ಸಚಿವರು ಮತ್ತು ಶಾಸಕರ ತಂಡವು ಯತ್ನಾಳ್‌ ವಿರುದ್ಧ ಹರಿಹಾಯ್ದರು.

ಮುಖಂಡರಾದ ಎಂ.ಪಿ.ರೇಣುಕಾಚಾರ್ಯ, ಬಿ.ಸಿ.ಪಾಟೀಲ್‌, ಎಲ್‌. ನಾಗೇಂದ್ರ, ಕಟ್ಟಾ ಸುಬ್ರಮಣ್ಯ ನಾಯ್ಡು, ವೈ.ಸಂಪಂಗಿ, ರೂಪಾಲಿ ನಾಯಕ, ಅಶೋಕ ಕಾಟವರ, ಹರ್ಷವರ್ಧನ್‌, ವಿರೂಪಾಕ್ಷ ಬಳ್ಳಾರಿ, ಗಂಗಾಧರ ನಾಯಕ್‌, ಗುಂಡಪ್ಪ ವಕೀಲ, ಸುನಿಲ್‌ ಹೆಗಡೆ, ಲಕ್ಷ್ಮೀ ನಾರಾಯಣ, ವೆಂಕಟ ಮುನಿಯಪ್ಪ, ಮಾಧವ ಮಲ್ಲಿಕಾರ್ಜುನ, ಸೋಮಶೇಖರ ರೆಡ್ಡಿ, ಶ್ರೀನಿವಾದ ಸಜ್ಜನರ, ಶಿಡ್ಲಘಟ್ಟ ರಾಜಣ್ಣ, ಮುನಿಸ್ವಾಮಿ, ಬಸವರಾಜ ನಾಯಕ, ಸುರೇಶ ಮಾರಿಹಾಳ, ಎಸ್‌.ವಿ.ರಾಮಚಂದ್ರ, ನಿರಂಜನ, ಬೆಳ್ಳಿ ಪ್ರಕಾಶ, ಮಸಾಲ ಜಯರಾಂ, ತರೀಕೆರೆ ಸುರೇಶ, ಪರಣ್ಣ ಮುನವಳ್ಳಿ ಹಾಗೂ ಹರ್ಷವರ್ಧನ ಅವರು ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಶಕ್ತಿ ಪ್ರದರ್ಶನ ಮಾಡಿದ್ದಾರೆ.

 

Tags:
error: Content is protected !!