ಮೈಸೂರು: ಕಳೆದ ಮೂರ್ನಾಲ್ಕು ತಿಂಗಳಿನಿಂದ ಉಪಟಳ ನೀಡಿ, ನಿತ್ಯವೂ ಆತಂಕ ಉಂಟು ಮಾಡುತ್ತಿದ್ದ ಹುಲಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಎಚ್.ಡಿ.ಕೋಟೆ ಸಮೀಪದ ಚಾಕಳ್ಳಿ ಬಳಿ ನಡೆದಿದೆ.
ರೈತ ಸರಗೂರು ನಿಂಗಣ್ಣ ಎಂದಿನಂತೆ ತಮ್ಮ ಮುಸುಕಿನ ಜೋಳದ ಬೆಳೆಗೆ ನೀರು ಹಾಯಿಸಲು ಹೋದಾಗ ಹುಲಿಯ ಮೃತದೇಹ ಪತ್ತೆಯಾಗಿದೆ. ಹುಲಿಯ ಕಳೇಬರ ನೋಡಿ ಆತಂಕಗೊಂಡ ನಿಂಗಣ್ಣ ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ನಂತರ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ವೈದ್ಯರು ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತ ಶ್ವಾನದಳದಿಂದಲೂ ತಪಾಸಣೆ ನಡೆಸಲಾಗಿದೆ.