Mysore
30
clear sky

Social Media

ಮಂಗಳವಾರ, 11 ಮಾರ್ಚ್ 2025
Light
Dark

ಕೂಂಬಿಂಗ್‌ ನಡೆಸುತ್ತಿದ್ದ ಸಿಬ್ಬಂದಿ ಮೇಲೆ ಅಠಾತ್‌ ದಾಳಿ ನಡೆಸಿದ ವ್ಯಾಘ್ರ

ಮೈಸೂರು: ಕೂಂಬಿಂಗ್‌ ನಡೆಸುತ್ತಿದ್ದ ಸಿಬ್ಬಂದಿ ಮೇಲೆ ಹುಲಿಯೊಂದು ಅಠಾತ್‌ ದಾಳಿ ನಡೆಸಿರುವ ಘಟನೆ ಕೋಣನಹೊಸಹಳ್ಳಿಯಲ್ಲಿ ನಡೆದಿದೆ.

ನಾಗರಹೊಳೆ ಉದ್ಯಾನವನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಕೂಂಬಿಂಗ್‌ ನಡೆಸುತ್ತಿದ್ದರು. ಈ ವೇಳೆ ಅಠಾತ್ತನೇ ಬಂದ ವ್ಯಾಘ್ರ ಅರಣ್ಯ ಇಲಾಖೆ ಸಿಬ್ಬಂದಿಯೋರ್ವರ ಮೇಲೆ ದಾಳಿ ಮಾಡಿದೆ.

ಪರಿಣಾಮ ದಿನಗೂಲಿ ನೌಕರ ದಿವಾಕರ್‌ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹುಲಿ ಪತ್ತೆಗೆ ಕೂಂಬಿಂಗ್‌ ಕಾರ್ಯಾಚರಣೆ ನಡೆಸುವ ವೇಳೆ ಜೋಳದ ಜಮೀನಿನಲ್ಲಿದ್ದ ವ್ಯಾಘ್ರ ದಿವಾಕರ್‌ ಮೇಲೆ ದಾಳಿ ನಡೆಸಿದೆ. ಈ ವೇಳೆ ಜೊತೆಗಿದ್ದವರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಹುಲಿ ಅಲ್ಲಿಂದ ಪರಾರಿಯಾಗಿ ಕಾಡು ಸೇರಿದೆ.

 

Tags: