ಮೈಸೂರು: ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣದಿಂದ, ದುರಸ್ಥಿಯಿಂದ ಮತ್ತು ಕೆಡಹುವಿಕೆಯಿಂದ ಉತ್ಪತ್ತಿಯಾಗುವ ಕಟ್ಟಡ ತ್ಯಾಜ್ಯವನ್ನು ಅನೇಕ ಕಡೆ ಸಾರ್ವಜನಿಕರು ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ಹಾಕುತ್ತಿರುವುದನ್ನು ನಿಯಂತ್ರಿಸಲು ಪಾಲಿಕೆಯು ಮೈಸೂರು ನಗರದ ಹೊರವಲಯದಲ್ಲಿನ ಸಿ.ಎ.05, ಹಂಚ್ಯಾ-ಸಾತಗಳ್ಳಿ `ಎ’ ವಲಯದಲ್ಲಿ ಖಾಲಿ ಪ್ರದೇಶವನ್ನು ಕಟ್ಟಡ ತ್ಯಾಜ್ಯದ ವಿಲೇವಾರಿಗಾಗಿ ಗುರುತಿಸಲಾಗಿದೆ.
ಮುಂದೆನ ದಿನಗಳಲ್ಲಿ ಸಾರ್ವಜನಿಕರು ಹಾಗೂ ಖಾಸಗಿ ವ್ಯಕ್ತಿಗಳು ನಗರ ಪಾಲಿಕೆಯಿಂದ ನಿಗದಿಗೊಳಿಸಿರುವ ಸ್ಥಳದಲ್ಲೇ ಕಡ್ಡಾಯವಾಗಿ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕೆಂದು ಸೂಚಿಸಲಾಗಿದ್ದು, ಒಂದು ವೇಳೆ ನಗರ ಪ್ರದೇಶದ ಇತರೆ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಕಂಡುಬoದಲ್ಲಿ ಸಂಬoಧಪಟ್ಟ ಕಟ್ಟಡದ ಮಾಲೀಕರಿಗೆ ಮತ್ತು ವಾಹನದ ಮಾಲೀಕರಿಗೆ ಭಾರಿ ಮೊತ್ತದ ದಂಡವನ್ನು ವಿಧಿಸುವುದಲ್ಲದೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದೆಂದು ಎಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.