Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮೂರು ನೂತನ ಶಾಲಾ ಕೊಠಡಿ ಉದ್ಘಾಟಿಸಿದ ಶಾಸಕ ಕೆ. ಹರೀಶ್ ಗೌಡ

ಮೈಸೂರು: ರಾಜ್ಯ ಸರ್ಕಾರದ ಮೈಸೂರು ಜಿಲ್ಲಾ ಪಂಚಾಯತಿಯ ಶಾಲಾ ಶಿಕ್ಷಣ ಇಲಾಖೆಯ ಮೈಸೂರು ನಗರ ಉತ್ತರ ವಲಯದ ಕುಂಬಾರ ಕೊಪ್ಪಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಮೂರು ನೂತನ ಕೊಠಡಿಗಳನ್ನು ಶಾಸಕ ಹರೀಶ್ ಗೌಡ ಅವರು ಉದ್ಘಾಟಿಸಿದರು.

ಸೋಮವಾರ (ಆ.19) ರಾಜ್ಯ ಸರ್ಕಾರದ ವಿವೇಕ ಶಾಲಾ ಯೋಜನೆಯ ಅಂದಾಜು ಮೊತ್ತ 45ಲಕ್ಷ ಮೊತ್ತದಲ್ಲಿ ಆಗಿರುವ ಕಾಮಗಾರಿಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ನನ್ನ ಕ್ಷೇತ್ರದಲ್ಲಿ ಅತಿಹೆಚ್ಚು ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಿವೆ. ಅವುಗಳಿಗೆ ಹೆಚ್ಚಿನ ದಾಖಲಾತಿ ಆಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅಗತ್ಯ ಮೂಲಭೂತ ಸೌಕರ್ಯಕಲ್ಪಿಸಲು ಸರ್ಕಾರ ಹಾಗೂ ಸಿ.ಎಸ್.ಆರ್ ಅನುದಾನಕ್ಕೆ ಸೂಕ್ತ ರೂಪುರೇಷೆ ಸಿದ್ದಪಡಿಸಿ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇದನ್ನು ಮುಖ್ಯ ಶಿಕ್ಷಕರು ಬಳಸಿಕೊಂಡು ಬಡಜನರು ಖಾಸಗಿ ಶಿಕ್ಷಣ ಸಂಸ್ಥೆಗಳ ಮೊರೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು. ಜತೆಗೆ ಇಂದಿನಿ ಸ್ಪರ್ಧಾತ್ಮಕ ಶಿಕ್ಷಣದಲ್ಲಿಯೂ ಪೈಪೋಟಿ ನೀಡುವ ಶಿಕ್ಷಣ ಸವಾಲು ಅರಿತುಕೊಳ್ಳಬೇಕು. ಈ ದಿಸೆಯಲ್ಲಿ ಈ ಶಾಲೆಯೂ ಮುಂದುವರೆಯಬೇಕೆಂದು ಆಶಿಸುತ್ತೇನೆಂದರು.

ಇದೇ ವೇಳೆ ಒಂದು ವರ್ಷಗಳ ಕಾಲ ಸ್ಮಾರ್ಟ್ ಕ್ಲಾಸ್ ತರಗತಿ ನಡೆಸಲು ಬೇಕಾಗುವ ಉಚಿತ ಇಂಟರ್ನೆಟ್ ಸೌಲಭ್ಯವನ್ನು ಶಾಸಕರು ವೈಯುಕ್ತಿಕವಾಗಿ ಭರಿಸಿಕೊಟ್ಟಿರುವುದಕ್ಕೆ ಶಾಲಾ ಮುಖ್ಯೋಪಾಧ್ಯರು ಹಾಗೂ ಶಿಕ್ಷಕರು ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.

ಸದರಿ ಕಾರ್ಯಕ್ರಮದಲ್ಲಿ ಬಿ.ಇ.ಓ, ಸಿ.ಡಿ.ಪಿ.ಓ., ಪಿ.ಆರ್.ಇ.ಡಿ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕುಂಬಾರುಕೊಪ್ಪಲು ಗ್ರಾಮದ ಮುಖಂಡರು, ಪೋಷಕರು ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು.

Tags: