ನಂಜನಗೂಡು: ಯುಗಾದಿ ಹಬ್ಬಕ್ಕೆಂದು ಕೆರೆಯಲ್ಲಿ ಹಸು ತೊಳೆಯಲು ಹೋದ ಮೂವರು ನೀರು ಪಾಲಾಗಿರುವ ಧಾರುಣ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಾಮಳ್ಳಿಯಲ್ಲಿ ನಡೆದಿದೆ.
ಮೃತರನ್ನು ಮುದ್ದೇಗೌಡ, ಬಸವೇಗೌಡ ಹಾಗೂ ವಿನೋದ್ ಎಂದು ಗುರುತಿಸಲಾಗಿದೆ.
ಮೊದಲಿಗೆ ವಿನೋದ್ ಹಸುವನ್ನು ತೊಳೆಯಲು ಕೆರೆಯ ಬಳಿ ಹೋಗಿದ್ದಾನೆ. ಈ ವೇಳೆ ಹಸು ಹಗ್ಗದ ಸಮೇತ ವಿನೋದ್‌ನನ್ನು ಕೆರೆಗೆ ಎಳೆದುಕೊಂಡು ಹೋಗಿದೆ.
ಈ ವೇಳೆ ವಿನೋದ್‌ನನ್ನು ರಕ್ಷಿಸಲು ಹೋದ ಮುದ್ದೇಗೌಡ ಹಾಗೂ ಬಸವೇಗೌಡ ಅವರು ಸಹ ಈಜುಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





