Mysore
17
few clouds

Social Media

ಗುರುವಾರ, 29 ಜನವರಿ 2026
Light
Dark

ನಾಲೆಯಲ್ಲಿ ಈಜಲು ತೆರಳಿದ್ದ ಮೂರು ಮಕ್ಕಳು ಸಾವು

ಸಾಲಿಗ್ರಾಮ : ಪಟ್ಟಣದ ಹೊರವಲಯದಲ್ಲಿ ಶ್ರೀ ಭಾಸ್ಕರ ಸ್ವಾಮಿ ದೇವಸ್ಥಾನದ ಬಳಿ ಚಾಮರಾಜ ಎಡದಂಡೆ ನಾಲೆಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರು ಪಾಲಾಗಿರುವ ಘಟನೆ ಸೋಮುವಾರ ಸಂಜೆ ನಡೆದಿದೆ.

ಪಟ್ಟಣದ ಗ್ರಾಮ ಪಂಚಾಯಿತಿ ಸದಸ್ಯ ಶಕೀಲ್ ಅವರ ಮಕ್ಕಳಾದ ಆಯಾನ್ (೧೫) ಮತ್ತು ಅಜನ್ (೧೩), ಪಟ್ಟಣದ ಮುಬಾರಕ್ ಅವರ ಮಗ ಲುಕ್ಮಾನ್ (೧೪) ಮೃತಪಟ್ಟಿರುವ ಬಾಲಕರು.

ಆಯಾನ್ ಎಸ್.ಎಸ್.ಎಲ್.ಸಿ. ಓದುತ್ತಿದ್ದು, ಅಜನ್ ೭ನೇ ತರಗತಿ ವಿದ್ಯಾರ್ಥಿ. ಇವರಿಬ್ಬರೂ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮತ್ತೊಬ್ಬ ಬಾಲಕ ಪಟ್ಟಣದ ಮುಬಾರಕ್ ಅವರ ಮಗ ಲುಕ್ಮಾನ್ ಸಾಲಿಗ್ರಾಮ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ೯ನೇ ತರಗತಿ ಓದುತ್ತಿದ್ದ.

ಈ ಮೂವರೂ ವಿದ್ಯಾರ್ಥಿಗಳು ಸೋಮವಾರ ದೀಪಾವಳಿ ರಜೆ ಇದ್ದುದರಿಂದ ಮಧ್ಯಾಹ್ನ ನಾಲೆಯಲ್ಲಿ ಈಜಲು ತೆರಳಿದ್ದು, ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಪೊಲೀಸರು, ಪೋಷಕರು, ಸಾರ್ವಜನಿಕರು, ಅಗ್ನಿಶಾಮಕ ದಳದವರು ಆಗಮಿಸಿ ಮೃತದೇಹಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದು, ಮೂವರೂ ಬಾಲಕರ ಮೃತದೇಹಗಳು ಪತ್ತೆಯಾಗಿದ್ದು, ಕೃಷ್ಣರಾಜನಗರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಸ್ಥಳದಲ್ಲಿ ಮೃತ ವಿದ್ಯಾರ್ಥಿಗಳ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರು ಮಕ್ಕಳ ಸಾವನ್ನು ಕಂಡು ಕಂಬನಿ ಮಿಡಿದರು.

 

Tags:
error: Content is protected !!