Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕಳ್ಳತನ ವೇಳೆ ಭಕ್ತಿ ಮೆರೆದ ಚಾಲಾಕಿ ಕಳ್ಳ: ದೋಚಿದ್ದು ಯಾರ ಮನೆಯಲ್ಲಿ ಗೊತ್ತಾ?

ಮೈಸೂರು: ಚಾಲಾಕಿ ಕಳ್ಳನೊಬ್ಬ ಸಿನಿಮಿಯಾ ರೀತಿಯಲ್ಲಿ ಪೊಲೀಸರ ಮನೆಯಲ್ಲಿಯೇ ಕಳ್ಳತನ ಮಾಡಿರುವ ಘಟನೆ ನಗರದ ಜೆಪಿ ನಗರ ಎರಡನೇ ಹಂತದಲ್ಲಿ ನಡೆದಿದೆ.

ತಡರಾತ್ರಿ ಮನೆ ಬೀಗ ಮುರಿದ ಕಳ್ಳರ ಗುಂಪೊಂದು ದರೋಡೆಗೆ ಮುಂದಾಗಿದ್ದಾರೆ. ಮನೆ ಮಾಲೀಕರು ಮನೆಗೆ ವಾಪಸಾದಾಗ ಕಳ್ಳರು ತಮ್ಮ ಬಳಿಯಿದ್ದ ಮಾರಕಾಸ್ತ್ರಗಳಿಂದ ದಾಳಿಗೆ ಮುಂದಾಗಿದ್ದಾರೆ. ಬಳಿಕ ಚಾಕು ತೋರಿಸಿ ಎದರಿಸಿ ಮನೆಯಲ್ಲಿದ್ದ ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಜತೆಗೆ ನಗದು ಹಣವನ್ನು ದೋಚಿರುವುದು ಗೊತ್ತಾಗಿದೆ.

ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ದರೋಡೆ ವೇಳೆ ಕಳ್ಳರು ಬಳಸಿದ್ದ ಕಬ್ಬಿಣದ ರಾಡ್‌, ಎಲೆಕ್ಟ್ರಿಕ್‌ ಸಾಮಾಗ್ರಿ, ಸಲಾಕೆ, ಬ್ಯಾಗ್‌ ಸೇರಿದಂತೆ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

ಕಳ್ಳತನ ವೇಳೆ ಭಕ್ತಿ ಮೆರೆದ ಚಾಲಾಕಿ ಕಳ್ಳ: ಇನ್ನು ಕಳ್ಳತನಕ್ಕಾಗಿ ಮನೆಯೊಂದರ ಬಾಗಿಲು ಮುರಿಯುವ ಮುನ್ನಾ ಕಳ್ಳನೊಬ್ಬ ನಿಂಬೆ ಹಣ್ಣಿಟ್ಟು, ನಮಸ್ಕರಿಸಿ ನಂತರ ಬಾಗಿಲು ಮುರಿದಿದ್ದಾರೆ. ಈ ದೃಶ್ಯ ಸದ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Tags: