Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸಮಾವೇಶ ನಡೆದ ಮೈದಾನವನ್ನು ಸ್ವಚ್ಛಗೊಳಿಸಿದ ಯದುವೀರ್‌ ದಂಪತಿ !

ಮೈಸೂರು: ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪತ್ನಿ ತ್ರಿಷಿಕಾ ಒಡೆಯರ್ ಅವರೊಂದಿಗೆ ಸೋಮವಾರ ಮಹಾರಾಜ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಮೈದಾನವನ್ನು ಸ್ವಚ್ಛಗೊಳಿಸಲು ಸಹಾಯ ಹಸ್ತ ಚಾಚಿದರು.

ಭಾನುವಾರ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಸಮಾವೇಶಕ್ಕೆ ಸೇರಿದ್ದ ಜನ ಜಂಗುಳಿಯಿಂದ ಇಡೀ ಮಹಾರಾಜ ಕಾಲೇಜು ಮೈದಾನ ಕಸಭರಿತವಾಗಿತ್ತು. ಅಲ್ಲಲ್ಲಿ ಬಿದ್ದಿದ್ದ ನೀರಿನ ಬಾಟಲಿಗಳು, ಪ್ಲಾಸ್ಟಿಕ್‌ಗಳು, ಕಸ-ಕಡ್ಡಿಗಳನ್ನ ಚೀಲಕ್ಕೆ ತುಂಬಿಸಿ ಹೊರಗೆ ಸಾಗಿಸಲು ಯದುವೀರ್ ಹಾಗೂ ತ್ರಿಷಿಕಾ ಒಡೆಯರ್ ಅವರೊಂದಿಗೆ ಅವರ ಅಭಿವಾನಿಗಳು ಮತ್ತು ನಗರಪಾಲಿಕೆ ಸಿಬ್ಬಂದಿಗಳು ಸೇರಿ ಸ್ವಚ್ಚಗೊಳಿಸಿದರು. ಬಳಿಕ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದ ಕಾರ್ಮಿಕರಿಗೆ ಯದುವೀರ್ ಅವರು ಕೃತಜ್ಞತೆ ಸಲ್ಲಿಸಿದರು.

ತ್ರಿಷಿಕಾ ಅವರೊಂದಿಗೆ ಯದುವೀರ್ ಕೂಡ ತ್ಯಾಜ್ಯವನ್ನು ಆರಿಸುತ್ತಿದ್ದದು ಎಲ್ಲರ ಗಮನ ಸೆಳೆಯಿತು. ಕೆಲವು ಸ್ವಯಂ ಸೇವಕರು ಕೂಡ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಯದುವೀರ್ ಅವರು ನಗರವು ಯಾವಾಗಲೂ ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ, ಮೋದಿಯವರ ಕಾರ್ಯಕ್ರಮದ ನಂತರ ಮೈದಾನವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ನನ್ನ ಕರ್ತವ್ಯವಾಗಿದೆ ಮತ್ತು ನಗರವನ್ನು ಸ್ವಚ್ಛವಾಗಿಡುವುದು ನಮ್ಮ ಪ್ರಧಾನಮಂತ್ರಿ ಉಪಕ್ರಮದ ಸ್ವಚ್ ಭಾರತ್ ಅಭಿಯಾನಕ್ಕೆ ಅನುಗುಣವಾಗಿದೆ,
ಮೈಸೂರು ನಗರದ ಸ್ವಚ್ಛತೆಗೆ ನನ್ನ ಮೊದಲ ಆದ್ಯತೆ’ ಇದು ಇನ್ನೂ ಮುಂದೆಯೂ ಮುಂದುವರೆಯುತ್ತದೆ ಎಂದರು.

ಯದುವೀರ್ ಸ್ವಚ್ಛತಾ ಕಾರ್ಯಕ್ಕೆ ಮೈದಾನಕ್ಕೆ ಬಂದಿದ್ದನ್ನು ಕಂಡ ಮುಂಜಾನೆ ವಾಯು ವಿಹಾರಕ್ಕೆ ಬಂದಿದ್ದ ಸಾರ್ವಜನಿಕರು ಆಶ್ಚರ್ಯಚಕಿತರಾಗಿ ಹತ್ತಿರಕ್ಕೆ ಬಂದು ಯದುವೀರ್ ಅವರನ್ನು ಮಾತನಾಡಿಸಿ, ಅವರು ಮೈದಾನವನ್ನು ಸ್ವಚ್ಛಗೊಳಿಸುವುದನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು.

Tags: