Mysore
32
few clouds

Social Media

ಗುರುವಾರ, 19 ಮಾರ್ಚ್ 2026
Light
Dark

ಸೌರಮಂಡಲ ಕಂಡು ಹಿಡಿದ ಋಷಿಮುನಿಗಳು: ಶಿವಪ್ರಕಾಶ್‌ ಅಭಿಮತ

ಮೈಸೂರು: ಮನೋಶಕ್ತಿ ಮುಖಾಂತರ ಋಷಿ ಮುನಿಗಳು ಸಾವಿರಾರು ವರ್ಷಗಳ ಹಿಂದೇ ಸೂರ್ಯನ ದೂರ, ಸೌರಮಂಡಲಗಳನ್ನು ಕಂಡು ಹಿಡಿದರು. ಈ ಆವಿಷ್ಕಾರವನ್ನು ವಿಜ್ಞಾನಿಗಳು ಹಾಗೂ ಖಗೋಳಜ್ಞಾನಿಗಳು ಒಪ್ಪಿಕೊಂಡಿದ್ದಾರೆ ಎಂದು ಪರಮಹಂಸ ಯೋಗ ಮಹಾವಿದ್ಯಾಲಯದ ಅಧ್ಯಕ್ಷ ಶಿವಪ್ರಕಾಶ್ ತಿಳಿಸಿದರು.

ನಗರದ ಸಯ್ಯಾಜಿ ರಾವ್ ರಸ್ತೆ, ತಿಲಕನಗರದ ಹೋಟೆಲ್ ರಿಯೊ ಮೆರಿಡಿಯನ್ ಅಲ್ಲಿ ಉಪಾಸನ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು ‘‘ ಮನಸ್ಸಿನ ಮನೋಶಕ್ತಿ ಹೇಗೆ ಜಾಗೃತಿಗೊಳಿಸಬೇಕು ಎಂಬ ವಿಚಾರ ಕುರಿತು ಮಾರ್ಗದರ್ಶನ ನಡೆಯಲಿದೆ. ಎಲ್ಲ ಕಾರ್ಯಗಳಿಗೂ ಮೂಲ ಬಿಂದು ಮನಸ್ಸು, ಮನಸ್ಸನ್ನು ಜಾಗೃತಗೊಳಿಸಿದರೆ ಜಗತ್ತಿನ ಎಲ್ಲಾ ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಮನಸ್ಸು ಉತ್ತಮವಾಗಿರಲು ಧ್ಯಾನ ಮುಖ್ಯ ಎಂದು ಮಾತನಾಡಿದರು.

ಬಳಿಕ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಬೇಕಾದರೆ, ಒಂದು ಹೃದಯ ಮತ್ತು ಮನಸ್ಸು ಎರಡು ಅಂಗಗಳು ಬಹುಮುಖ್ಯ, ನಾವು ಏನೇ ಕೆಲಸಗಳನ್ನು ಮಾಡಬೇಕಾದರೆ ಮನಸ್ಸು ಮುಖ್ಯ. ಮನಸ್ಸನ್ನ ನಿಯಂತ್ರಿಸಿದರೆ ಅತ್ತುತ್ತಮ ಕೆಲಸ ಸಾಧಿಸಲು ಸಾಧ್ಯ. ಮನಸ್ಸಿನ್ನು ನಿರ್ಗಹಿಸದಿದ್ದರೆ. ಯಾವುದೇ ಘಟನೆಗಳು ಬೇಕಾದರು ನಮಗೆ ತಿಳಿಯದಂತೆ ಘಟಿಸಿಬಿಡುತ್ತವೆ. ಹಾಗಾಗಿ ಮನಸ್ಸಿ ಹಿಡಿತ ಮುಖ್ಯವಾಗಿರಬೇಕು ಎಂದು ಅಭಿಪ್ರಾಯ ಪಟ್ಟರು.

ಬಳಿಕ ದೀಪಾಂಜಲಿ ಮಹಿಳಾ ಸಂಘದಿಂದ ಭಜನಾ ಕಾರ್ಯಕ್ರಮ ನೆರವೇರಿಸಲಾಯಿತು.

ಉಪಾಸನ ಫೌಂಡೇಷನ್‌ನ ಸಂಸ್ಥಾಪಕ ಸದ್ಗುರು ಶ್ರೀರಾಮ ಅವರು ಮನೋಶಕ್ತಿ ಕಾರ್ಯಗಾರ ನಡೆಸಿಕೊಟ್ಟರು.

Tags:
error: Content is protected !!