Mysore
17
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಕೊನೆಗೂ ಮೈಸೂರಿನಲ್ಲಿ ದಸರಾಗೂ ಮೊದಲೇ ಗುಂಡಿ ಬಿದ್ದ ರಸ್ತೆಗಳಿಗೆ ಸಿಕ್ತು ಮುಕ್ತಿ ..!

ಮೈಸೂರು : ನಾಡಹಬ್ಬ ಮೈಸೂರು ದಸರಾ ಬಂದ್ರೆ ಸಾಕು ಅಧಿಕಾರಿಗಳು ಮೈಸೂರಿನಲ್ಲಿ ಗುಂಡಿಬಿದ್ದ ಎಲ್ಲಾ ರಸ್ತೆಗಳಿಗೆ ಡಾಂಬಾರು ಹಾಕಿ ಅದನ್ನ ಮುಚ್ಚಿವ ಕೆಲಸಕ್ಕೆ ಮುಂದಾಗುತ್ತಿದ್ದರು. ಆದರೆ ಅಧಿಕಾರಿಗಳು ಈ ವರ್ಷ ದಸರಾಗೂ ಮುನ್ನವೇ ಪಾಲಿಕೆಯ ಎಲ್ಲಾ ವಾರ್ಡ್‌ ಗಳಲ್ಲಿ ಗುಂಡಿಬಿದ್ದ ರಸ್ತೆಗಳನ್ನ ಮುಚ್ಚಿವ ಕೆಲಸಕ್ಕೆ ಮುಂದಾಗಿದ್ದಾರೆ.

ನಗರದ ಪ್ರತಿ ವಾರ್ಡ್ ಗಳಲ್ಲಿರುವ ಗುಂಡಿಬಿದ್ದ ರಸ್ತೆಗಳ ಬಗ್ಗೆ ಪಾಲಿಕೆಯ ಅಧಿಕಾರಿಗಳು ಸಮೀಕ್ಷೆ ಮಾಡಿದ್ದು, ಅಂದಾಜು ೩೦ ರಿಂದ ೪೦ ಗುಂಡಿಗಳನ್ನ ಪತ್ತೆಹಚ್ಚಿದ್ದಾರೆ. ಪಾಲಿಕೆಯ ೯ ವಲಯಗಳಿಂದ ೩೫೦ಕ್ಕೂ ಹೆಚ್ಚು ಗುಂಡಿಗಳಿಗೆ ಎಂದು ಎಂಜಿನಿಯರ್‌ ಗಳು ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ.

ಇನ್ನು ಮಹಾನಗರ ಪಾಲಿಕೆಯ ಸಾಮಾನ್ಯ ಅನುದಾನದ ಅಡಿ ಗುಂಡಿ ಮುಚ್ಚುವುದು ಸೇರಿ ರಸ್ತೆ ಡಾಂಬರೀಕರಣಕ್ಕೆ ವಲಯವಾರು ೧೦ ಲಕ್ಷ ರೂಪಾಯಿಯಂತೆ ೯ ವಲಯಗಳಿಗೆ ಕಾಮಗಾರಿ ನಡೆಸಲು ೯೦ ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆ  ಮಾಡಲಾಗಿದೆ.

ಇನ್ನು ನಗರದಲ್ಲಿ ಮಳೆ ನಿಂತಿರುವುದರಿಂದ ವೈಜ್ಞಾನಿಕ ರೀತಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ಆರಂಭವಾಗಿದ್ದು, ಆಯಾ ಎಲ್ಲಾ ವಲಯಾಧಿಕಾರಿಗಳು ಮತ್ತು ಎಂಜಿನಿಯರ್‌ ಗಳು ಗುರುತಿಸುವ ರಸ್ತೆಯಲ್ಲಿ ಗುತ್ತಿಗೆದಾರರು ಕೆಲಸ ನಿರ್ವಹಿಸಲು ಸೂಚಿಸಿದ್ದಾರೆ ಎನ್ನಲಾಗಿದೆ.

Tags:
error: Content is protected !!