Mysore
24
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಜಿ.ಟಿ ದೇವೇಗೌಡ ಬುಡಕ್ಕೂ ಬಂತು ಮುಡಾ ಪ್ರಕರಣ

ಮೈಸೂರು: ಮುಡಾದ ಪ್ರಕರಣ ಸಿಎಂ ಸಿದ್ದರಾಮಯ್ಯ ವಿರುದ್ಧ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಮಧ್ಯೆಯೇ ಶಾಸಕ ಜಿ.ಟಿ.ದೇವೇಗೌಡರ ಸಂಬಂಧಿ ಮಹೇಂದ್ರ ಮುಡಾದಿಂದ 19 ನಿವೇಶನಗಳನ್ನು ಪಡೆದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರಿದ್ದಾರೆ.

ನಗರದಲ್ಲಿ ಇಂದು (ನ.16) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಜಿ.ಟಿ.ದೇವೇಗೌಡ ಅವರ ಸಹೋದರಿಯ ಮಗ ಮಹೇಂದ್ರ ಮುಡಾದಿಂದ 19 ನಿವೇಶನಗಳನ್ನು ಪಡೆದಿದ್ದಾರೆ.  ಜಿಟಿ ದೇವೇಗೌಡರೇ ಈ ನಿವೇಶನಗಳನ್ನ ಅಕ್ರಮವಾಗಿ ನಿವೇಶನ ಕೊಡಿಸಿದ್ದಾರೆ. ಈ ನಿವೇಶನಗಳನ್ನು ಮುಡಾ ಯಾವಾಗ ವಶಪಡಿಸಿಕೊಂಡಿದೆ ಎಂಬ ಬಗ್ಗೆ ಮಾಹಿತಿ ನಿಖರವಾಗಿಲ್ಲ. ಈ ಭೂಮಿಯ ಮಾಲೀಕ ಮಹೇಂದ್ರ ಅಲ್ಲ ಎಂದು ಹೇಳಿದರು.

ಮಹೇಂದ್ರ ನಕಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ಅಕ್ರಮವಾಗಿ ಈ ಭೂಮಿಯನ್ನು ಪರಿಹಾರದ ಮೂಲಕ ಪಡೆದಿದ್ದಾರೆ. ನಿಜವಾಗಿಯೂ ಹೇಳಬೇಕೆಂದರೆ ಆ ವ್ಯಕ್ತಿಗೆ ದೇವನೂರು ಬಡಾವಣೆ ಸ್ಥಳದಲ್ಲಿ ಭೂಮಿಯೇ ಇಲ್ಲ. ಹೀಗಿರುವಾಗ ವಿಜಯನಗರದ 3ನೇ ಹಂತದ ಬಡಾವಣೆಯಲ್ಲಿ 19 ನಿವೇಶನಗಳನ್ನು ಹಂಚಿಕೆ ಮಾಡಿರುವುದಕ್ಕೆ ಮಾನದಂಡಗಳೇನು ಎಂದು ಪ್ರಶ್ನಿಸಿದ್ದಾರೆ.

Tags:
error: Content is protected !!