Mysore
29
broken clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಅಂಬಾರಿ ಆನೆ ಮಾದರಿಯಲ್ಲಿ ವಿಶ್ವ ಹಾಲು ದಿನ ಆಚರಿಸಿ ಸಂಭ್ರಮ

ಜಂಬೂ ಸವಾರಿ ನೆನೆಪಿಸಿದ ಹಾಲಿನ ಅಂಬಾರಿ

ಮೈಸೂರು: ಹಾಲಿನ ಉತ್ಪನ್ನಗಳ ಚಿತ್ರವನ್ನು ಹೊತ್ತ ಆನೆಯ ನಡಿಗೆ ಕಂಡು ಒಂದು ಕ್ಷಣ ಜಂಬೂ ಸವಾರಿ ಬಂದೇ ಬಿಟ್ಟಿತೇ ಎಂದು ತಿರುಗಿ ನೋಡುತ್ತಿದ್ದ ಸಾರ್ವಜನಿಕರ ಕೂತೂಹಲದ ಕೇಂದ್ರ ಬಿಂದುವಾಯಿತು.

ಆಲನಹಳ್ಳಿಯ ಮೈಮುಲ್‌ ನಿಂದ ವಿಶ್ವ ಹಾಲು ದಿನದ ಅಂಗವಾಗಿ “ಹೈನೋದ್ಯಮದ ಸಂಭ್ರಮವನ್ನು‌ ಸಂಭ್ರಮಿಸೋಣ” ಎಂಬ ದ್ಯೇಯದೊಂದಿಗೆ ಹಾಲಿನ ಉತ್ಪನ್ನಗಳು ಮತ್ತು ಹಾಲಿನ ಮಹತ್ವ, ಅದರ ಅನೂಕೂಲಗಳ ಬಗ್ಗೆ ಕುರಿತು ಪ್ರಚಾರ ಮಾಡುವ ಮೆರವಣಿಗೆಯಲ್ಲಿ ಹಾಲಿನ ಅಂಬಾರಿ ಆಕರ್ಷಣೆಯಾಗಿತ್ತು. ಹೌದು ಇದೇ ಮೊಟ್ಟ ಮೊದಲ ಬಾರಿಗೆ ತುಮಕೂರು ಜಿಲ್ಲೆಯ ನೊಣವಿನ ಕೆರೆಯ ಕಾಡು ಸಿದ್ದೇಶ್ವರ ಮಠದ ಸಾಕಾನೆಯ ಮೇಲೆ ನಂದಿನಿ ಹಾಲಿನ ಉತ್ಪನ್ನವನ್ನು ಮಾದರಿ ಅಂಬಾರಿ ಮೇಲೆ ಇರಿಸಿ ಆನೆಯೊಂದಿಗೆ ಮೆರವಣಿಗೆ ಮಾಡಲಾಯಿತು.

ಆಲನಹಳ್ಳಿ ಕೇಂದ್ರದಿಂದ ಹೊರಟ ಹಾಲಿನ ಅಂಬಾರಿಗೆ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯವರು ಬಲೂನ್‌ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ಬಳಿಕ ಟೆರಿಷಿಯನ್‌ ಕಾಲೇಜು ವೃತ್ತ, ಬನ್ನೂರು ಮುಖ್ಯರಸ್ತೆಯ ನೂತನ ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ನಜರ್‌ಬಾದ್‌ನ ಶಿಕ್ಷಕರ ಭವನದವರೆಗೆ ಮೆರೆವಣಿಗೆ ನಡೆಯಿತು. ಈ ವೇಳೆ ರಸ್ತೆಯ ಅಕ್ಕಪಕ್ಕದಲ್ಲಿ ನಿಂತಿದ್ದ ಜನರೆಲ್ಲರೂ ಆನೆಯನ್ನು ವೀಕ್ಷಿಸಿ ಜಂಬೂ ಸವಾರಿ ನೆನಪಿಸಿಕೊಂಡರಲ್ಲದೆ, ವಿಶ್ವ ಹಾಲಿನ ದಿನದ ಬಗ್ಗೆಯೂ ಅರಿಯುವಂತಾಯಿತು. ಆ ಮೂಲಕ ಮೆರವಣಿಗೆ ಜಂಬೂ ಸವಾರಿ ಮಾದರಿಯಲ್ಲಿ ಎಲ್ಲರೂ ಸಂಭ್ರಮಿಸಿದರು.

ವಿಶ್ವವನ್ನು ಉಳಿಸುವ ಹಾಲು
ಅಮೃತ ರೂಪದಲ್ಲಿ ಹಾಲಿನ ಸೇವನೆ ಮಾಡುತ್ತಿದ್ದೇವೆ. ಜೀವಂತವಾಗಿ ಇರಬೇಕಾದರೂ ಶುದ್ಧಗಾಳಿ, ನೀರು ಮೊದಲಾದವರು ಸಿಗಬೇಕಾದರೆ ನಾವೆಲ್ಲರೂ ಹಾಲು ಕುಡಿಯಬೇಲಕಿದೆ. ಶ್ರೀ ಕೃಷ್ಣನ ಕಾಲದಿಂದಲೂ ಹಾಲಿನ ಬಳಕೆ ನಮ್ಮ ಜೀವನದೊಟ್ಟಿಗೆ ಬಂದೆ. ಸಕ್ಕರೆ ಪಿಷ್ಟ, ಸಾಸರ ಜನಕ ಸೇರಿ ಅನೇಕ‌‌ ಅಂಶಗಳನ್ನು ಹಾಲಿನಲ್ಲಿ ನೋಡಬಹುದಾಗಿದೆ. ಆರು ತಿಂಗಳವರೆಗೂ ಯಾವ ಮಗು ತಾಯಿಯ ಹಾಲು ಕುಡಿಯುತ್ತದೆಯೋ ಡಯಾಬಿಟಿಸ್, ಡ್ರೈಪೋಟೆಷನ್ ಬರುವುದಿಲ್ಲ. ವಿಶ್ವವನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ‌ ಮಾಡುತ್ತಿರುವುದರಲ್ಲಿ ಹಾಲು ದಿನಾಚರಣೆಯೂ ಒಂದಾಗಿದೆ. ಅಪೌಷ್ಠಿಕತೆ ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ನಂದಿನಿಯ ಬಳಕೆಯನ್ನು ಹೆಚ್ಚೆಚ್ಚು ಮಾಡಿ. *-ಗೋಪಾಲಗೌಡ, ಮಕ್ಕಳ ತಜ್ಞ.*

ನಿತ್ಯವೂ ಹಾಲನ್ನು ಕುಡಿಯುವ ನಾವು ಇಷ್ಟೆಲ್ಲಾ ಬೆಳವಣಿಗೆ ಹೊಂದಿದ್ದೇವೆ. ಹಾಲಿಗೂ ಒಂದು ದಿನ ಮೀಸಲಿಟ್ಟು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲಿ ಹೆಚ್ಚೆಚ್ಚು ನಂದಿನ ಉತ್ಪನ್ನಗಳನ್ನು ಬಳಸುವ ಮೂಲಕ ರೈತರಿಗೆ ನೆರವಾಗೋಣ. *-ದಿವಾನ್ಸ್‌, ವಿದ್ಯಾರ್ಥಿ.*

Tags:
error: Content is protected !!