ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಸುತ್ತೂರು ಜಾತ್ರಾ ಮಹೋತ್ಸವವೂ ನಾಲ್ಕನೇ ದಿನಕ್ಕೆ ಕಾಲಿರಿಸಿದೆ.
ಸುತ್ತೂರು ಜಾತ್ರಾ ಮಹೋತ್ಸವವೂ ಇಂದು(ಜನವರಿ.29) ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಅದ್ದೂರಿಯಾಗಿ ನಡೆಯುತ್ತಿದ್ದು, ಸಾವಿರಾರು ಸಾರ್ವಜನಿಕರು ಜಾತ್ರೆಗೆ ಭೇಟಿ ನೀಡಿದ್ದಾರೆ.
ಈ ಸುತ್ತೂರು ಜಾತ್ರೆ ಅತ್ಯಂತ ಐತಿಹಾಸಿಕ ಮತ್ತು ವಿಶಿಷ್ಟವಾಗಿದ್ದು, ನಾಡಿನಾದ್ಯಂತ ಹೆಸರಾಗಿದೆ. ಜಾತ್ರೆ ನಾಡಿನ ಸಂಸ್ಕೃತಿ, ಜನಪದ, ಮತ್ತು ಕಲೆಗಳಿಗೆ ಅಪಾರ ಬೆಂಬಲ ನೀಡುತ್ತಿದೆ.
ಈ ಸಂದರ್ಭದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹಾಸನ ಸಂಸದರಾದ ಶ್ರೇಯಸ್ ಪಟೇಲ್, ಶಾಸಕರಾದ ಸಿ.ಸಿ ಪಾಟೀಲ್, ಅರವಿಂದ ಬೆಲ್ಲದ್ ಇನ್ನಿತರರು ಉಪಸ್ಥಿತರಿದ್ದರು.
ಇನ್ನೂ ಸಂಜೆ 7 ಗಂಟೆಗೆ ಜರುಗಲಿರುವ ವಿಶೇಷ ತೆಪ್ಪೋತ್ಸವವನ್ನು ಕಣ್ತುಂಬಿಕೊಳ್ಳಲು ಅನೇಕ ಸಾರ್ವಜನಿಕರು ಕಾತುರದಿಂದ ಕಾಯುತ್ತಿದ್ದಾರೆ.





