Mysore
28
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಕನ್ನಡದ ಮೊದಲ ವಚನಕಾರ ದಾಸಿಮಯ್ಯ

ಮೈಸೂರು : ವಚನಕಾರ ದೇವರ ದಾಸಿಮಯ್ಯ ಅವರು ಕನ್ನಡಕ್ಕೆ ಅಪಾರ ಕೊಡುಗೆ  ನೀಡಿದ್ದಾರೆ ಎಂದು  ಬೆಂಗಳೂರಿನ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ. ಎಸ್.ಲಕ್ಷ್ಮಿನಾರಾಯಣ  ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ದೇವರ ದಾಸಿಮಯ್ಯ ಜಯಂತಿಯಲ್ಲಿ ಉಪನ್ಯಾನ ನೀಡಿದ ಅವರು, ಪ್ರಸ್ತುತ  ದಾಸಿಮಯ್ಯ ಅವರ 176 ವಚನಗಳು ನಮಗೆ ಲಭ್ಯವಿದೆ. ಆ ವಚನಗಳು ಸಿಹಿ ನುಡ, ಒಳ್ಳೆಯ ಸಂದೇಶ,  ಏಚ್ಚರಿಕೆಯ ಮಾತಿನ ಜೊತೆಗೆ ವ್ಯಂಗ್ಯದಿoದ ಸಹ ಕೂಡಿದ್ದಾಗಿವೆ. ಇವರು ಬಸವಣ್ಣನಿಗಿಂತ ಹಿರಿಯವರಾಗಿದ್ದರು ಎಂದು ಹೇಳಿದರು.

ವಚನಗಳ ಮೂಲಕವೇ ಅಂದಿನ ಸಮಾಜಕ್ಕೆ ಉತ್ತರ ನೀಡುತ್ತಿದ್ದ ದಾಸಿಮಯ್ಯ, ತಮ್ಮ ಮಡದಿ ಹಾಗೂ ಅನ್ನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು ಎಂದರು.

ಯಾದವಗಿರಿ ರಾಮಕೃಷ್ಣ ಆಶ್ರಮದ ಅಘಹರನಂದಾಜೀ ಮಹರಾಜ್ ಮಾತನಾಡಿ,  ಕಾಯಕವೇ ಕೈಲಾಸ ಎಂಬಂತೆ ತಮ್ಮ ಕರ್ತವ್ಯವನ್ನು ಶ್ರದ್ದೆ ಮತ್ತು ನಿಷ್ಠೆಯಿಂದ ಮಾಡಿ. ಯಾವುದೇ ವೃತ್ತಿ ಮೇಲಲ್ಲ ಕೀಳಲ್ಲ ಪ್ರತಿಯೊಂದು ವೃತ್ತಿಯಲ್ಲಿ ಅದರದೇ ಆದ ಗೌರವವಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ. ಎನ್ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ. ಎಂ. ಡಿ ಸುದರ್ಶನ್, ಮೂಡದ ಮಾಜಿ ಅಧ್ಯಕ್ಷ ರಾಜೀವ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಸದಸ್ಯ ಸಿ.ಆರ್ .ಮೂರ್ತಿ, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಆರ್.ಸುನೀಲ್, ಶೋಭ ಸುನೀತ್, ಹೇಮಾ ಗಂಗಾಪ್ಪ, ಬಾಲರಾಜ್, ಮಹಿಳಾ ಸಂಘದ ಅಧ್ಯಕ್ಷೆ ಮಂಜುಳ ಶ್ರೀನಿವಾಸ್, ನೇಕಾರ ಒಕ್ಕೂಟದ ಅಧ್ಯಕ್ಷ ದಿನೇಶ್, ಸಮುದಾಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನರಸಿಂಹ ಮೂರ್ತಿ  ಉಪಸಿತರಿದ್ದರು.

Tags:
error: Content is protected !!