Mysore
19
clear sky

Social Media

ಬುಧವಾರ, 28 ಜನವರಿ 2026
Light
Dark

ತಾಪಮಾನ ಹೆಚ್ಚಳ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ !

ಮೈಸೂರು : ಬೇಸಿಗೆ ತಾಪಮಾನ ಹೆಚ್ಚಳ ಹಿನ್ನೆಲೆಯಲ್ಲಿ ಕೆಎಂಪಿಕೆ ಟ್ರಸ್ಟ್ ಹಾಗೂ ಅರಿವು ಸಂಸ್ಥೆ ಯಿಂದ ನಗರದ ಲಕ್ಷ್ಮೀಪುರಂನಲ್ಲಿರುವ ಮರಗಳಲ್ಲಿ ಪಕ್ಷಿಗಳ ನೀರಿನ ಸಂಗ್ರಹ ಹಾಗೂ ನೀರಿನ ಅರವಟ್ಟಿಗೆ ಉದ್ಘಾಟಿಸಲಾಯಿತು.

ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ಮನುಷ್ಯನಿಗೆ ಹೇಗೆ ದಿನನಿತ್ಯದ ಬದುಕಿನಲ್ಲಿ ಆಹಾರ, ನೀರು, ಗಾಳಿ ಅಗತ್ಯವೋ ಅದೇ ರೀತಿ ಪ್ರಾಣಿ-ಪಕ್ಷಿಗಳಿಗೂ ಕೂಡ ಬೇಕು. ಈ ಹಿನ್ನೆಲೆಯಲ್ಲಿ ಈಗಾಗಲೇ ನಿರಂತರವಾಗಿ ಎರಡು ತಿಂಗಳಿಂದ ನಾನಾ ಪ್ರದೇಶಗಳಲ್ಲಿ ನೀರಿನ ಬಟ್ಟಲನ್ನು ಗಿಡ ಮರಗಳಿಗೆ ಅಲ್ಲಲ್ಲಿ ಹಗ್ಗದಿಂದ ನೇತು ಹಾಕಲಾಗಿದೆ. ಇದರಿಂದ ಪಕ್ಷಿಗಳು ನೀರು ಕುಡಿದು ದಾಹ ತೀರಿಸಿಕೊಳ್ಳುಲು ಸಹಾಯವಾಗುತ್ತದೆ ಎಂದರು.

ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಗಿರೀಶ್, ರಾಮ್ ಮೂರ್ತಿ, ಎಸ್.ಎನ್.ರಾಜೇಶ್, ಶ್ರೀಕಾಂತ್ ಕಶ್ಯಪ್, ಬೈರತಿ ಲಿಂಗರಾಜು, ಚಕ್ರಪಾಣಿ, ಮಹೇಶ್ ಕುಮಾರ್, ಭಂಡಾರಿ, ದಯಾನಂದ್ ಇತರರು ಹಾಜರಿದ್ದರು.

Tags:
error: Content is protected !!